ಭಾರತದ ವಿರುದ್ಧ ಹೇಳಿಕೆ ಕೊಟ್ಟಿದ್ದ ಥೈಲ್ಯಾಂಡ್‌ ಅಧಿಕಾರಿಗೆ ಮುಖಭಂಗ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತದ ವಿರುದ್ಧ ಹೇಳಿಕೆ ನೀಡಿದ್ದ ಥೈಲ್ಯಾಂಡ್‌ನ ಅಧಿಕಾರಿ ಒಬ್ರನ್ನ ಅಲ್ಲಿನ ಸರ್ಕಾರ ಅಧಿಕಾರದಿಂದ ಕೆಳಗಿಳಿಸಿದೆ. ವಿಶ್ವ ವ್ಯಾಪಾರ ಕೇಂದ್ರ ಅಥವಾ WTO ಮೀಟಿಂಗ್‌ನಲ್ಲಿ ಥೈಲ್ಯಾಂಡ್‌ WTO ರಾಯಭಾರಿ ಪಿಮ್‌ಚಾನೋಕ್‌ ವೊಂಕೋರ್‌ಪೋನ್‌ ಪಿಟ್‌ಪೀಲ್ಡ್‌ ಅನ್ನೋರು ಭಾರತದ ವಿರುದ್ಧ ಹೇಳಿಕೆ ನೀಡಿದ್ರು. ಭಾರತ ಸರ್ಕಾರದ MSPಯ ಅಕ್ಕಿ ಖರೀದಿ ಕಾರ್ಯಕ್ರಮ, ರೈತರಿಂದ ಅಕ್ಕಿ ಖರೀದಿಸಿ ಜನರಿಗೆ ಕೊಡಲ್ಲ. ಬದಲಾಗಿ ರಫ್ತು ಮಾರುಕಟ್ಟೆಯನ್ನ ವಶಪಡಿಸಿಕೊಳ್ಳೋಕೆ.. ಡಾಮಿನೇಟ್‌ ಮಾಡೋಕೆ ಭಾರತ ಈ ಪ್ರೋಗ್ರಾಮ್‌ನ್ನ ಬಳಸ್ತಿದೆ ಅಂದಿದ್ರು. ಈ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬೆನ್ನಲ್ಲೇ ಥೈಲ್ಯಾಂಡ್‌ ಸರ್ಕಾರ ಪಿಟ್‌ಫೀಲ್ಡ್‌ ಅವ್ರನ್ನ ರಿಪ್ಲೇಸ್‌ ಮಾಡಿದೆ. ನೀವು WTOನಲ್ಲಿ ಇರೋದೆ ಬೇಡ.. ವಾಪಸ್‌ ಥೈಲ್ಯಾಂಡ್‌ಗೆ ರಿಪೋರ್ಟ್‌ ಮಾಡಿ ಅಂತೇಳಿದೆ. ಅಲ್ಲದೆ ಪಿಟ್‌ಫೀಲ್ಡ್‌ ಅವ್ರು ಬಳಸಿದ ಭಾಷೆ, ನಡವಳಿಕೆ ಎರಡರಲ್ಲೂ ಅಭಿರುಚಿ ಇರ್ಲಿಲ್ಲ ಅಂತ ಥೈಲ್ಯಾಂಡ್‌ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply