ರಿಲಾಯನ್ಸ್ ಮಂಡಳಿಗೆ ನೀತಾ ಅಂಬಾನಿ ರಾಜೀನಾಮೆ: ಮಂಡಳಿ ನಿರ್ದೇಶಕ ಸ್ಥಾನಕ್ಕೇರಿದ ಮೂವರು ಮಕ್ಕಳು

masthmagaa.com:

ರಿಲಾಯನ್ಸ್‌ ಗ್ರೂಪ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ, ಅವ್ರ ಪತ್ನಿ ನೀತಾ ಅಂಬಾನಿ ರಿಲಾಯನ್ಸ್‌ ಬೋರ್ಡ್‌ನಿಂದ ಕೆಳಗಿಳಿದಿದ್ದಾರೆ. ಹಾಗೆ ಅವರ ಮೂರು ಮಕ್ಕಳಾದ ಇಶಾ ಅಂಬಾನಿ, ಆಕಾಶ್‌ ಅಂಬಾನಿ ಹಾಗೂ ಅನಂತ್‌ ಅಂಬಾನಿ ಅವ್ರು ಬೋರ್ಡ್‌ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ರಿಲಾಯನ್ಸ್‌ ಇಂಡಸ್ಟ್ರೀಜ್‌ ಲಿಮಿಟೆಡ್‌ (RIL)ನ ವಾರ್ಷಿಕ ಜನರಲ್‌ ಮೀಟಿಂಗ್‌ಗೂ ಮುನ್ನ ನಿರ್ದೇಶಕರ ಮಂಡಳಿಯ ಸಭೆ ನಡೆದಿತ್ತು. ಈ ವೇಳೆ ಇಶಾ, ಆಕಾಶ್ ಮತ್ತು ಅನಂತ್ ಅಂಬಾನಿ ಅವ್ರನ್ನ ಕಂಪನಿಯ ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕರನ್ನಾಗಿ ನೇಮಕ ಮಾಡುವಂತೆ ಮಾನವ ಸಂಪನ್ಮೂಲ ಸಮಿತಿಯಿಂದ ಶಿಫಾರಸು ಮಾಡಲಾಗಿತ್ತು. ಬೋರ್ಡ್ ಡೈರೆಕ್ಟರ್ಸ್ ಸಭೆಯಲ್ಲಿ ಈ ಶಿಫಾರಸನ್ನು ಅಂಗೀಕರಿಸಲಾಗಿದೆ. ಷೇರುದಾರರ ಅನುಮೋದನೆ ಬಳಿಕ ಈ ಮೂವರು ಅಧಿಕಾರ ಸ್ವೀಕರಿಸಿದ ನಂತರ ಅವರ ನೇಮಕಾತಿ ಜಾರಿಗೆ ಬರುತ್ತದೆ ಅಂತ RIL ತನ್ನ ಹೇಳಿಕೆಯಲ್ಲಿ ಹೇಳಿದೆ.

-masthmagaa.com

Contact Us for Advertisement

Leave a Reply