ಹಾವೇರಿ ಸಾಮೂಹಿಕ ಅತ್ಯಾಚಾರದ ಕೇಸ್‌ನ ಚಾರ್ಜ್‌ಶೀಟ್‌ ಸಲ್ಲಿಕೆ!

masthmagaa.com:

ಹೊಸ ವರ್ಷದ ಆರಂಭದಲ್ಲಿ ತೀವ್ರ ಸದ್ದು ಮಾಡಿದ್ದ ಹಾವೇರಿಯ ಸಾಮೂಹಿಕ ಅತ್ಯಾಚಾರ ಕೇಸ್‌ನಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ಘಟನೆ ನಡೆದು 58 ದಿನ ಆದ್ಮೇಲೆ ಇದೀಗ ಹಾನಗಲ್‌ ಪೋಲೀಸರು ಅಲ್ಲಿನ JMF ಕೋರ್ಟ್‌ಗೆ 873 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಜನವರಿ 8ರಂದು ನಡೆದಿದ್ದ ಈ ಘಟನೆ ವಿಚಾರವಾಗಿ, ಮುಸ್ಲಿಂ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದ 7 ಪ್ರಮುಖ ಆರೋಪಿಗಳು ಸೇರಿ ಒಟ್ಟು 19 ಜನರ ಹೆಸರನ್ನ ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಈ ಕೇಸ್‌ನ ತನಿಖೆ ಮುಗಿದು 20 ದಿನ ಆಗಿತ್ತು. ಆದ್ರೆ FSL ಹಾಗೂ DNA ರಿಪೋರ್ಟ್‌ಗಳು ಇತ್ತೀಚೆಗೆ ಬಂದಿರೋದ್ರಿಂದ, ಈಗ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ.

-masthmagaa.com

Contact Us for Advertisement

Leave a Reply