ಫಿಲ್ಮ್‌ ಫೇರ್‌ ಪ್ರಶಸ್ತಿ ವಿರುದ್ಧ ಶಾಕಿಂಗ್‌ ಹೇಳಿಕೆ ಕೊಟ್ಟ “ದಿ ಕಾಶ್ಮೀರಿ ಫೈಲ್ಸ್‌” ಚಿತ್ರ ನಿರ್ದೇಶಕ!

masthmagaa.com:

68ನೇ ಫಿಲ್ಮ್‌ ಫೇರ್‌ ಅವಾರ್ಡ್‌ ಫಂಕ್ಷನ್‌ನಲ್ಲಿ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿಯವರ “ದಿ ಕಾಶ್ಮೀರಿ ಫೈಲ್ಸ್‌” ಚಿತ್ರ 7 ಕೆಟಗರಿಯಲ್ಲಿ ಸೆಲೆಕ್ಟ್‌ ಆಗಿತ್ತು. ಇದನ್ನ ನಿರ್ದೇಶಕ ಬೇಡ ಅಂತ ನಿರಾಕರಿಸಿದ್ದಾರೆ.

ಕಳೆದ ವರ್ಷ ರಿಲೀಸ್‌ ಆದ ವಿವೇಕ್‌ ಅಗ್ನಿಹೋತ್ರಿ ಅವರ ನಿರ್ದೇಶನದ “ದಿ ಕಾಶ್ಮೀರಿ ಫೈಲ್ಸ್‌” ಚಿತ್ರ ಭಾರತದಾದ್ಯಂತ ಹೆಸರು ಮಾಡಿ, ಅಂದಿನ ಕಾಶ್ಮೀರಿ ಪಂಡಿತರ ಮಾರಣಹೋಮದ ಕರಾಳತೆಯನ್ನ ಎತ್ತಿ ಹಿಡಿದಿತ್ತು. ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ ನಟನೆಯ ಈ ಸಿನಿಮಾಕ್ಕೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗಿತ್ತು. ಭಾರತ ಮಾತ್ರವಲ್ಲದೇ ಅಮೆರಿಕದ 16 ಸಿಟಿಗಳಲ್ಲಿ ಈ ಚಿತ್ರದ ಪ್ರಿ ರಿಲೀಸ್ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಎಲ್ಲರಿಂದಲೂ ಶಭಾಷ್‌ ಎನಿಸಿಕೊಂಡಂತ “ದಿ ಕಾಶ್ಮೀರಿ ಫೈಲ್ಸ್‌” 68ನೇ ಫಿಲ್ಮ್‌ ಫೇರ್‌ ಅವಾರ್ಡ್‌ ಫಂಕ್ಷನ್‌ನಲ್ಲಿ 7 ಕೆಟಗರಿಯಲ್ಲಿ ಪ್ರಶಸ್ತಿ ಪಡೆಯೋಕೆ ಸೆಲೆಕ್ಟ್‌ ಆಗಿತ್ತು. ಈ ಎಲ್ಲಾ ಪ್ರಶಸ್ತಿಗಳನ್ನ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ನಿರಾಕರಿಸಿ ಅಚ್ಚರಿ ಉಂಟುಮಾಡಿದ್ದಾರೆ. ಏಕೆ ಪ್ರಶಸ್ತಿ ತಗೋಳೊದಿಲ್ಲ ಅನ್ನೋ ಕುರಿತು ಟ್ವೀಟ್‌ ಮಾಡಿದ್ದಾರೆ. “ದಿ ಕಾಶ್ಮೀರಿ ಫೈಲ್ಸ್‌” 68ನೇ ಫಿಲ್ಮ್‌ ಫೇರ್‌ ಅವಾರ್ಡ್‌ ಫಂಕ್ಷನ್‌ನಲ್ಲಿ 7 ಕೆಟಗರಿಯಲ್ಲಿ ಸೆಲೆಕ್ಟ್‌ ಆಗಿದೆ ಅಂತ ನನಗೆ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಈ ರೀತಿಯ ಫಿಲ್ಮ್‌ ಫೇರ್‌ ಅವಾರ್ಡ್‌ ಫಂಕ್ಷನ್‌ಗಳಲ್ಲಿ ಅವಾರ್ಡ್‌ಗಳನ್ನ ಯಾವ ಆಧಾರದ ಮೇಲೆ ಸೆಲೆಕ್ಟ್‌ ಮಾಡ್ತಾರೆ ಅಂತ ನನಗೆ ಗೊತ್ತಿಲ್ಲ. ಒಳ್ಳೊಳ್ಳೆ ಸಿನಿಮಾಗಳನ್ನ ಕೊಟ್ಟಂತಹ ಡೈರೆಕ್ಟರ್‌ಗಳ ಮುಖಾನೇ ಕಾಣೋದಿಲ್ಲ. ಕೇವಲ ಆರ್ಟಿಸ್ಟ್‌ಗಳಷ್ಟೇ ಫೇಮಸ್‌ ಆಗಿ ಬಿಡ್ತಾರೆ. ಇಂತಹ ಅವಾರ್ಡ್‌ಗಳು ನನಗೆ ಬೇಕಾಗಿಲ್ಲ. ಸಂಜಯ್ ಲೀಲಾ ಬನ್ಸಾಲಿ ಅಥವಾ ಸೂರಜ್ ಬರ್ಜಾತ್ಯಾ ಅವರಂತಹ ಮಾಸ್ಟರ್‌ ಡೈರೆಕ್ಟರ್‌ಗಳ ಮುಖ ಎಲ್ಲೂ ಕಾಣೋದಿಲ್ಲ. ಸಂಜಯ್‌ ಬನ್ಸಾಲಿ ಡೈರೆಕ್ಟ್‌ ಮಾಡಿದ “ಗಂಗೂಬಾಯಿ ಕಾಠಿಯಾವಾಡಿ” ಚಿತ್ರದಲ್ಲಿ ಅಲಿಯಾ ಭಟ್‌, ಸೂರಜ್‌ ಬರ್ಜಾತ್ಯಾ ನಿರ್ದೇಶನದ “ಉಂಚೈ”ನಲ್ಲಿ ಅಮಿತಾಬ್‌ ಬಚ್ಚನ್‌, ಅನೀಜ್‌ ಬಾಜ್ಮಿ ನಿರ್ದೇಶನದ “ಭೂಲ್‌ ಭೂಲಯ್ಯದಲ್ಲಿ 2″ದಲ್ಲಿ ಕಾರ್ತೀಕ್‌ ಆರ್ಯನ್‌ ಫೇಮಸ್‌ ಆದ್ರು. ಈ ಎಲ್ಲಾ ಸಿನಿಮಾಗಳ ಕ್ರೆಡಿಟ್‌ ಬರೀ ನಟರುಗಳಿಗಷ್ಟೇ ಸೀಮಿತ ಆಗ್ತಾ ಇದೆ. ನಿರ್ದೇಶಕರುಗಳು ತೆರೆಮರೆಯಲ್ಲೇ ಉಳಿದುಕೊಳ್ತಾ ಇದಾರೆ. ಬಾಲಿವುಡ್‌ನ ಇಂತಹ ಅನೈತಿಕ ಮತ್ತು ಭ್ರಷ್ಟತನದಿಂದ ಕೂಡಿರುವ ಅವಾರ್ಡ್‌ ಫಂಕ್ಷನ್‌ಗಳ ವಿರುದ್ಧ ನ್ನು ಪ್ರತಿಭಟಿಸುತ್ತೇನೆ. ಇಂತಹ ಪ್ರಶಸ್ತಿಗಳನ್ನ ನಾನು ತಗೋಳೊದಿಲ್ಲ. ಫಿಲ್ಮ್‌ ಫೇರ್‌ ನಂತಹ ಅನೈತಿಕ ಅಥ್ವಾ ಭ್ರಷ್ಟ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಾನು ಭಾಗವಹಿಸೋಕೆ ಇಷ್ಟ ಪಡೋದಿಲ್ಲ. ಇಂತಹ ಅವಾರ್ಡ್‌ ಫಂಕ್ಷನ್‌ಗಳಲ್ಲಿ ಬರಹಗಾರರು, ನಿರ್ದೇಶಕರು, ಅಥವಾ ತಂತ್ರಜ್ಞರನ್ನ ಬದಿಗಿರಿಸಿ ಕೀಳು ಮಟ್ಟದಲ್ಲಿ ನಡೆಸಿಕೊಳ್ತಾರೆ, ಹೀರೋ ಹೀರೋಯಿನ್‌ಗಳನ್ನೇ ಹೈಲೆಟ್‌ ಮಾಡ್ತಾರೆ. ಹಾಗಾಗಿ ನಾನು ಇದೆಲ್ಲದರಿಂದ ದೂರ ಇರ್ತೀನಿ. ಪ್ರಶಸ್ತಿಗಳನ್ನ ಗೆದ್ದವರಿಗೆ ಅಭಿನಂದನೆ ಮತ್ತು ಗೆಲ್ಲದೇ ಇರುವವರಿಗೆ ಸ್ವಲ್ಪ ಜಾಸ್ತಿ ಅಭಿನಂದನೆಗಳು. ನಾನು ಒಬ್ಬಂಟಿ ಅಂತ ಭಾವಿಸಬೇಡಿ. ಕಾಲಕ್ರಮೇಣ ಎಲ್ಲವೂ ಸಮಾನತೆಯಲ್ಲಿ ಸಾಗತ್ತೆ”ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply