ಅಮೆರಿಕದಲ್ಲಿ ರಷ್ಯಾ ಉದ್ಯಮಿಯ ಮನೆ ಮೇಲೆ ಎಫ್​ಬಿಐ ದಾಳಿ!

masthmagaa.com:

ರಷ್ಯಾದ ಕೋಟ್ಯಾಧಿಪತಿ ಒಲೆಗ್ ಡೆರಿಪಸ್ಕಗೆ ಸೇರಿದ ಮನೆಗಳ ಮೇಲೆ ಎಫ್​ಬಿಐ ಅಂದ್ರೆ ಫೆಡರಲ್ ಬ್ಯೂರೋ ಇನ್ವೆಸ್ಟಿಗೇಷನ್ ಅಧಿಕಾರಿಗಳು ರೇಡ್ ಮಾಡಿದ್ದಾರೆ. ನ್ಯೂಯಾರ್ಕ್ ನಗರ ಮತ್ತು ವಾಷಿಂಗ್ಟನ್​​​​ನಲ್ಲಿರೋ ಮನೆಗಳಿಗೆ ನುಗ್ಗಿ ಶೋಧ ಕಾರ್ಯ ನಡೆಸಿದ್ದಾರೆ. ಈಗಾಗಲೇ ಒಲೆಗ್ ಡೆರಿಪಸ್ಕ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ. 2016ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಮುಖ್ಯಸ್ಥರಾಗಿದ್ದ ಪೌಲ್ ಮನಫೋರ್ಟ್​​ಗೂ ಈ ಒಲೆಗ್ ಡೆರಿಪಸ್ಕ ಕೆಲಸ ನೀಡಿದ್ರು. ಕಟ್ಟಡದ ಬಳಿ ಅಪರಾಧದ ಜಾಗ.. ಯಾರಿಗೂ ಪ್ರವೇಶವಿಲ್ಲ ಅಂತ ಟೇಪ್ ಹಾಕಿರೋ ಅಧಿಕಾರಿಗಳು ಕೆಲವೊಂದು ಬಾಕ್ಸ್​ಗಳನ್ನು ಕಟ್ಟಡದಿಂದ ಹೊರಗೆ ತಗೊಂಡು ಹೋಗಿದ್ದಾರೆ. ವಾಹನವನ್ನು ಕೂಡ ಟೋಯಿಂಗ್ ಮಾಡ್ಕೊಂಡು ತಗೊಂಡು ಹೋಗಿದ್ದಾರೆ. ಆದ್ರೆ ದಾಳಿಗೆ ನಿಖರವಾದ ಕಾರಣ ಏನು ಅನ್ನೋದು ಮಾತ್ರ ಇನ್ನೂ ಗೊತ್ತಾಗಿಲ್ಲ.

-masthmagaa.com

Contact Us for Advertisement

Leave a Reply