ಪ್ರಧಾನಿ ಮೋದಿ ಭದ್ರತಾ ವೈಫಲ್ಯ! ತನಿಖೆ ನಡೆಸದಂತೆ ಬೆದರಿಕೆ

masthmagaa.com:

ಪ್ರಧಾನಿ ಮೋದಿ ಪಂಜಾಬ್ ಭೇಟಿ ವೇಳೆ ಭದ್ರತಾ ವೈಫಲ್ಯ ದಿನಕ್ಕೊಂದು ತಿರುವು ಪಡ್ಕೊಳ್ತಿದೆ. ಕಳೆದ ವಾರ ಕೆಲ ವಕೀಲರು ನಮಗೆ ಖಲಿಸ್ತಾನಿ ಸಂಘಟನೆಯಾದ ಸಿಖ್​​ ಫರ್ ಜಸ್ಟೀಸ್​​ನಿಂದ ಬೆದರಿಕೆ ಕರೆ ಬಂದಿದೆ ಅಂತ ಆರೋಪಿಸಿದ್ರು. ಅದ್ರ ನಡುವೆಯೇ ಈಗ ಸುಪ್ರೀಂಕೋರ್ಟ್​ ರಚಿಸಿರೋ ತನಿಖಾ ತಂಡದ ನೇತೃತ್ವ ವಹಿಸಿರೋ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರಿಗೂ ಬೆದರಿಕೆಯ ವಾಯ್ಸ್ ನೋಟ್ ಬಂದಿದೆ. ಈ ಪ್ರಕರಣದ ತನಿಖೆ ನಡೆಸೋಕೆ ನಾವು ಬಿಡೋದಿಲ್ಲ. ಪ್ರಧಾನಿ ಮೋದಿ ಮತ್ತು ಸಿಖ್ಖರು.. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು..ಜನವರಿ 26ರಂದು ಪ್ರಧಾನಿ ಮೋದಿಯವರನ್ನೂ ಬ್ಲಾಕ್ ಮಾಡ್ತೀವಿ ಅಂತ ಎಚ್ಚರಿಸಲಾಗಿದೆ. ಇದೇ ರೀತಿಯ ಸಂದೇಶವನ್ನು ಲಾಯರ್​​ಗಳಿಗೂ ಕಳುಹಿಸಲಾಗಿದೆ. ಸುಪ್ರೀಂಕೋರ್ಟ್​​​ ಲಾಯರ್​​ಗಳ ಲಿಸ್ಟ್​ ಮಾಡ್ತಿದ್ದೀವಿ ಈ ಪ್ರಕರಣದಿಂದ ಸಾಧ್ಯವಾದಷ್ಟು ದೂರ ಇರಿ ಅಂತ ಬೆದರಿಸಲಾಗಿದೆ. ಜೊತೆಗೆ ಕಳೆದ ವಾರ ನಾವು ಸಂದೇಶ ಕಳುಹಿಸಿದ್ದರ ಬಗ್ಗೆ ಪೊಲೀಸ್ ಕಂಪ್ಲೆಂಟ್ ದಾಖಲಿಸಲಾಗಿದೆ. ಹೀಗಾಗಿ ಮುಸ್ಲಿಂ ವಿರೋಧಿ, ಸಿಖ್ ವಿರೋಧಿ ಸುಪ್ರೀಂಕೋರ್ಟ್​ ಲಾಯರ್​​ಗಳನ್ನು ಇದಕ್ಕೆ ಜವಾಬ್ದಾರರನ್ನಾಗಿ ಮಾಡಲಾಗುತ್ತೆ ಅಂತಲೂ ಎಚ್ಚರಿಸಲಾಗಿದೆ ಅಂತ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply