ಬೆಂಗಳೂರು ರಾಜ ಭವನಕ್ಕೆ ಬಾಂಬ್‌ ಬೆದರಿಕೆ! ಕೋಲಾರದ ವ್ಯಕ್ತಿ ಅರೆಸ್ಟ್‌!

masthmagaa.com:

ಬೆಂಗಳೂರಿನ ರಾಜ ಭವನದಲ್ಲಿ ಬಾಂಬ್‌ ಇಡಲಾಗಿದೆ ಅಂತ ಡಿಸೆಂಬರ್‌ 11 ರ ರಾತ್ರಿ NIA ಕಂಟ್ರೋಲ್‌ ರೂಮ್‌ಗೆ ಕಾಲ್‌ ಮಾಡಿ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಇದೀಗ ಬಾಂಬ್‌ ಬೆದರಿಕೆ ಹಾಕಿದ್ದ ಆರೋಪಿ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನನ್ನ ಕೋಲಾರದ ಮುಳಬಾಗಿಲು ಮೂಲದ 34 ವರ್ಷದ ಭಾಸ್ಕರ್‌ ಅಂತ ಗುರುತಿಸಲಾಗಿದೆ. ಅಂದ್ಹಾಗೆ ಈತ ರಾತ್ರೋರಾತ್ರಿ ದೊಮ್ಮಲೂರಿನಲ್ಲಿರೋ NIA ಕಂಟ್ರೋಲ್‌ ರೂಮ್‌ಗೆ ಕಾಲ್‌ ಮಾಡಿ ಬಾಂಬ್‌ ಬೆದರಿಕೆ ಹಾಕಿದ್ದ. ಈ ಬೆದರಿಕೆಗೆ ತಲೆ ಕೆಡಿಸಿಕೊಂಡ ಬೆಂಗಳೂರು ಸಿಟಿ ಪೊಲೀಸ್‌, ತಕ್ಷಣವೇ ರಾಜ ಭವನದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ್ರು. ಆದ್ರೆ ಸುದೀರ್ಘ ಕಾರ್ಯಾಚರಣೆಯ ನಂತರ ಇದೊಂದು ಹುಸಿ ಬಾಂಬ್‌ ಬೆದರಿಕೆ ಅಂತ ಡಿಸೆಂಬರ್‌ 12 ರಂದು ಬೆಂಗಳೂರು ಪೊಲೀಸ್‌ ಹೇಳಿದ್ರು. ಆದ್ರೆ ಇದೀಗ ಬೆದರಿಕೆ ನೀಡಿರೋ ಕಿಡಿಗೇಡಿ ಸಿಕ್ಕಿಬಿದ್ದಿದ್ದು, ಬೆಂಗಳೂರು ಪೊಲೀಸ್‌ ಈತನನ್ನ ಅರೆಸ್ಟ್‌ ಮಾಡಿ ತನಿಖೆ ನಡೆಸ್ತಿದ್ದಾರೆ. ಈತನಿಗೆ ಇಂಟರ್‌ನೆಟ್‌ನಲ್ಲಿ NIA ಕಂಟ್ರೋಲ್‌ ರೂಮ್‌ನ ನಂಬರ್‌ ಸಿಕ್ತಂತೆ. ಅದಕ್ಕೆ ಕಾಲ್‌ ಮಾಡಿ ಬಾಂಬ್‌ ಬೆದರಿಕೆ ಹಾಕಿದ್ದನಂತೆ ಅಂತ ಸದ್ಯ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದ್ರೆ ಆರೋಪಿ ಬಾಂಬ್‌ ಬೆದರಿಕೆ ಯಾಕೆ ಹಾಕಿದ್ದಾನೆ ಅಂತ ಗೊತ್ತಾಗಿಲ್ಲ ಎಂದು ಪೊಲೀಸ್‌ ಹೇಳಿದ್ದಾರೆ. ಸದ್ಯ ಈತನ ವಿರುದ್ಧ ವಿಧಾನ ಸೌಧ ಪೊಲೀಸ್‌ ಪ್ರಕರಣ ದಾಖಲಿಸಿದ್ದಾರೆ.

-masthmagaa.com

Contact Us for Advertisement

Leave a Reply