ವಿಶ್ವದ ಕೊರೋನಾ ಅಪ್​ಡೇಟ್​​! ಎಲ್ಲಿ ಎಷ್ಟೆಷ್ಟು ಕೇಸ್?

masthmagaa.com:

ಅಮೆರಿಕದಲ್ಲಿ ಕೊರೊನಾ ಹಾವಳಿ ಮುಂದುವರಿದಿದೆ. ನಿನ್ನೆ ಒಂದೇ ದಿನ 7 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಹೊಸ ತಳಿ ಒಮೈಕ್ರಾನ್ ಅಮೆರಿಕದಲ್ಲಿ ಭಾರಿ ವೇಗವಾಗಿ ಹರಡುತ್ತಿದೆ. ದೇಶದಲ್ಲಿ ಆಸ್ಪತ್ರೆಗೆ ದಾಖಲಾಗ್ತಿರೋರ ಪ್ರಮಾಣ ಈ ಹಿಂದಿನ ಅಲೆಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸಂಖ್ಯೆಯನ್ನೂ ಮೀರಿಸಬಹುದು ಅಂತ ಹೇಳಲಾಗ್ತಿದೆ.

ಯುನೈಟೆಡ್ ಕಿಂಗ್​ಡಮ್​​ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ನಿನ್ನೆ ಒಂದೇ ದಿನ ಇಲ್ಲಿ 1.93 ಲಕ್ಷ ಮಂದಿಗೆ ಕೊರೋನಾ ಬಂದಿದೆ. 2021ರ ಕೊನೆಯ ವಾರದಲ್ಲಿ ಬ್ರಿಟನ್​​​ನ ಪ್ರತಿ 20 ಮಂದಿಯಲ್ಲಿ ಒಬ್ಬರಿಗೆ ಕೊರೋನಾ ಬಂದಿದೆ ಅಂತ ಗೊತ್ತಾಗಿದೆ. ಹೌಸ್ ಆಫ್ ಕಾಮನ್ಸ್​ನಲ್ಲಿ ಮಾತಾಡಿದ ಬೋರಿಸ್ ಜಾನ್ಸನ್, ಒಮೈಕ್ರಾನ್ ವೇಗವಾಗಿ ಹರಡುತ್ತಿದೆ. 9 ದಿನಗಳ ಅಂತರದಲ್ಲಿ ಕೊರೋನಾ ಪ್ರಕರಣಗಳು ಡಬಲ್ ಆಗ್ತಿವೆ. ಆಸ್ಪತ್ರೆಗೆ ದಾಖಲಾಗ್ತಿರೋರ ಸಂಖ್ಯೆಯಲ್ಲೂ ನಿರಂತರವಾಗಿ ಹೆಚ್ಚಳವಾಗ್ತಿದೆ ಅಂತ ಹೇಳಿದ್ದಾರೆ.

ಫ್ರಾನ್ಸ್​​ನಲ್ಲಿ ಕಳೆದ 24 ಗಂಟೆಯಲ್ಲಿ 3.22 ಲಕ್ಷ ಜನರಿಗೆ ಕೊರೋನಾ ವೈರಾಣು ಅಂಟಿದೆ. ಇದು ಕೊರೋನಾ ಪತ್ತೆಯಾದ ಬಳಿಕ ಫ್ರಾನ್ಸ್​ನಲ್ಲಿ ಒಂದೇ ದಿನ ಪತ್ತೆಯಾದ ಅತಿ ಹೆಚ್ಚಿನ ಪ್ರಕರಣಗಳಾಗಿವೆ.

ಒಂದೆರಡು ಕೇಸ್ ಬಂದ್ರೂ ಫುಲ್ ಲಾಕ್​ಡೌನ್ ಮಾಡ್ತಿದ್ದ ಆಸ್ಟ್ರೇಲಿಯಾದಲ್ಲಿ ಕಳೆದ 24 ಗಂಟೆಯಲ್ಲಿ 64 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಒಮೈಕ್ರಾನ್ ಎಷ್ಟರ ಮಟ್ಟಿಗೆ ಹಾವಳಿ ಇಡ್ತಿದೆ ಅಂದ್ರೆ ಟೆಸ್ಟಿಂಗ್ ಕೇಂದ್ರಗಳ ಮುಂದೆ ಜನ ಉದ್ದುದ್ದ ಕ್ಯೂ ನಿಲ್ತಿದ್ದಾರೆ. ಟೆಸ್ಟಿಂಗ್ ವ್ಯವಸ್ಥೆ ಕೂಡ ಸಾಕಾಗ್ತಿಲ್ಲ. ಮೇ ತಿಂಗಳಲ್ಲಿ ಚುನಾವಣೆ ಎದುರು ನೋಡ್ತಿರೋ ಸ್ಕಾಟ್ ಮಾರಿಸನ್​​ಗೆ ಒಮೈಕ್ರಾನ್ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇಸ್ರೇಲ್​​ನಲ್ಲಿ ಬೂಸ್ಟರ್ ಶಾಟ್​​ ಜೊತೆಗೆ 4ನೇ ಡೋಸ್ ಲಸಿಕೆಗೂ ಗ್ರೀನ್ ಸಿಗ್ನಲ್ ನೀಡಲಾಗಿದೆ. ಆದ್ರೆ ಇಲ್ಲಿ ಕೊರೋನಾ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ನಿನ್ನೆ ಒಂದೇ ದಿನ 12 ಸಾವಿರ ಮಂದಿಗೆ ಸೋಂಕು ತಗುಲಿದೆ. ಇಸ್ರೇಲ್​ನಲ್ಲಿ ಒಂದೇ ದಿನ ಇಷ್ಟು ಮಂದಿಗೆ ಕೊರೋನಾ ಬಂದಿದ್ದು ಇದೇ ಮೊದಲು.. ಈ ಹಿಂದೆ ಸೆಪ್ಟೆಂಬರ್​ನಲ್ಲಿ 11,300 ಮಂದಿಗೆ ಸೋಂಕು ತಗುಲಿತ್ತು.

-masthmagaa.com

Contact Us for Advertisement

Leave a Reply