ಇಂತವರು EXTRA ಕೊರೋನ ಲಸಿಕೆ ಹಾಕಿಸಕೊಳ್ಳಬೇಕು: WHO

masthmagaa.com:

ರೋಗ ನಿರೋಧಕ ಶಕ್ತಿ ಕಮ್ಮಿ ಇರೋರಿಗೆ ಎಕ್ಸ್ಟ್ರಾ ಡೋಸ್ ಲಸಿಕೆ ಹಾಕಿಸಿದರೆ ಒಳ್ಳೇದು ಅಂತ ವಿಶ್ವ ಆರೋಗ್ಯ ಸಂಸ್ಥೆ ಅಡ್ವೈಸರಿ ಜಾರಿ ಮಾಡಿದೆ. 60ಕ್ಕಿಂತ ಜಾಸ್ತಿ ವಯಸ್ಸಾದವರು., ಹಾಗೂ ವಿವಿಧ ರೋಗನಿರೋಧಕ ಶಕ್ತಿಯ ಕೊರತೆಯ ಕಾಯಿಲೆ ಎದುರಿಸುತ್ತಿರೋರಿಗೆ ಇದು ಅನ್ವಯ ಆಗುತ್ತೆ ಅಂತ ಹೇಳಿದ್ದಾರೆ. ವಿಶೇಷವಾಗಿ ಚೀನಾ ಸೈನೋಫಾರ್ಮಾ ಹಾಗೂ ಸೈನೋವ್ಯಾಕ್ ಲಸಿಕೆಗಳು ಕೆಲ ಕಾಲದ ಬಳಿಕ ರಕ್ಷಣೆ ನೀಡ್ತಿಲ್ಲ ಅಂತ ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ಗೊತ್ತಾಗಿದೆ. ಹೀಗಾಗಿ ಈ ಲಸಿಕೆಗಳನ್ನ ಪಡೆದ 60 ವರ್ಷ ಮೇಲ್ಪಟ್ಟವರು ಇನ್ನೊಂದು ಹೆಚ್ಚವರಿ ಡೋಸ್ ತಗೋಬೇಕು ಅಂತ ವಿಶ್ವ ಆರೋಗ್ಯ ಸಂಸ್ಥೆ ರೆಕಮೆಂಡ್ ಮಾಡಿದೆ.

-masthmagaa.com

Contact Us for Advertisement

Leave a Reply