ಏಪ್ರಿಲ್ 20ರ ಬಳಿಕವೂ ಲಾಕ್​ಡೌನ್ ಸಡಿಲಿಕೆ ಇಲ್ಲ: ಕೇಜ್ರಿವಾಲ್

masthmagaa.com:

ದೆಹಲಿಯಲ್ಲಿ ಏಪ್ರಿಲ್ 20ರ ಬಳಿಕವೂ ಲಾಕ್​ಡೌನ್​ನಲ್ಲಿ ಯಾವುದೇ ವಿನಾಯಿತಿ ನೀಡೋದಿಲ್ಲ ಅಂತ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿ ಜನರ ರಕ್ಷಣೆ ನಮ್ಮ ಜವಾಬ್ದಾರಿ. ಹೀಗಾಗಿ ಈಗ ಇರುವ ರೀತಿಯಲ್ಲೇ ಲಾಕ್​ಡೌನ್ ಮುಂದುವರಿಯಲಿದೆ. ಹೊಸದಾಗಿ ಯಾವ ಕ್ಷೇತ್ರಕ್ಕೂ ವಿನಾಯಿತಿ ನೀಡಲ್ಲ. ಒಂದು ವಾರದ ಬಳಿಕ ತಜ್ಞರ ಜೊತೆ ಮತ್ತೊಮ್ಮೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಅಂತ ಕೇಜ್ರಿವಾಲ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಮೇ 3ರವರೆಗೆ ಲಾಕ್​ಡೌನ್ ವಿಸ್ತರಣೆ ಮಾಡಿದ್ದ ಕೇಂದ್ರ ಸರ್ಕಾರ, ಏಪ್ರಿಲ್ 20ರ ಬಳಿಕ ಕೆಲವೊಂದು ಕ್ಷೇತ್ರಗಳಿಗೆ ವಿನಾಯಿತಿ ನೀಡಬಹುದು. ಅದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು ಅಂತ ಹೊಸ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿತ್ತು. ಆದ್ರೆ ದೆಹಲಿ ಸರ್ಕಾರ ಲಾಕ್​ಡೌನ್ ಸಡಿಲಗೊಳಿಸದೇ ಇರಲು ನಿರ್ಧರಿಸಿದೆ. ಈ ಮೂಲಕ ಇಂತಹ ನಿರ್ಧಾರ ಕೈಗೊಂಡ ಮೊದಲ ರಾಜ್ಯ ಎನಿಸಿಕೊಂಡಿದೆ.

-masthmagaa.com

Contact Us for Advertisement

Leave a Reply