masthmagaa.com:

ನ್ಯೂಯಾರ್ಕ್​: ಮಹಿಳಾ ವಿಭಾಗದ ಯುಎಸ್‌ ಓಪನ್‌ ಫೈನಲ್‌ ಪಂದ್ಯದಲ್ಲಿ ಜಪಾನ್‌ನ ನವೊಮಿ ಒಸಾಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 1 ಗಂಟೆ 53 ನಿಮಿಷಗಳ ಕಾಲ ನಡೆದ ಪೈಪೋಟಿಯಲ್ಲಿ 1–6, 6–3 ಮತ್ತು 6–3 ಅಂತರದಲ್ಲಿ ಬೆಲಾರಸ್‌ನ ವಿಕ್ಟೋರಿಯ ಅಜರೆಂಕಾ ಅವರನ್ನು ಸೋಲಿಸುವ ಮೂಲಕ ಮೂರನೇ ಗ್ರ್ಯಾನ್‌ಸ್ಲಾಂ ಮುಡಿಗೇರಿಸಿಕೊಂಡಿದ್ದಾರೆ. 22 ವರ್ಷ ವಯಸ್ಸಿನ ಒಸಾಕಾಗೆ ಇದು ಎರಡನೇ ಯುಎಸ್‌ ಓಪನ್ ಪ್ರಶಸ್ತಿಯಾಗಿದೆ. ಈ ಹಿಂದೆ 2018ರಲ್ಲಿ ಮೊದಲ ಬಾರಿಗೆ ಯುಎಸ್‌ ಓಪನ್‌ ಮತ್ತು 2019ರಲ್ಲಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಗೆಲುವು ಸಾಧಿಸಿದ್ದರು.

ವಿಶೇಷ ಅಂದ್ರೆ ಈ ಬಾರಿಯ ಯುಎಸ್​ ಓಪನ್​ನಲ್ಲಿ ತಾವು ಆಡಿದ 7 ಪಂದ್ಯಗಳಲ್ಲೂ ಒಬ್ಬೊಬ್ಬರ ಹೆಸರಿನ ಮಾಸ್ಕ್ ಧರಿಸುವ ಮೂಲಕ ನವೊಮಿ ಒಸಾಕ ಎಲ್ಲರ ಗಮನ ಸೆಳೆದಿದ್ದಾರೆ. ಮೊದಲ ಪಂದ್ಯದಲ್ಲಿ ಬ್ರಿಯೋನ್ನಾ ಟೇಲರ್, ಎರಡನೇ ಪಂದ್ಯದಲ್ಲಿ ಎಲಿಜಾ ಮೆಕ್ಲೈನ್, ಮೂರನೇ ಪಂದ್ಯದಲ್ಲಿ ಅಹಮದ್ ಅರ್ಬೆರಿ, ಕ್ವಾರ್ಟರ್ ಫೈನಲ್​ನಲ್ಲಿ ಜಾರ್ಜ್ ಫ್ಲಾಯಿಡ್, ಸೆಮಿ ಫೈನಲ್​ನಲ್ಲಿ ಫಿಲಾಂಡೋ ಕ್ಯಾಸೈಲ್ ಮತ್ತು ಫೈನಲ್​ನಲ್ಲಿ 12 ವರ್ಷದ ಬಾಲಕ ತಮೀರ್ ರೈಸ್​ನ ಹೆಸರುಳ್ಳ ಮಾಸ್ಕ್ ಧರಿಸಿದ್ದರು.

ಇವರೆಲ್ಲರೂ ಅಮೆರಿಕದಲ್ಲಿ ಹಿಂಸಾಚಾರಕ್ಕೆ ಬಲಿಯಾದ ಕಪ್ಪು ವರ್ಣಿಯರಾಗಿದ್ದಾರೆ. ಅವರನ್ನು ಗೌರವಿಸುವ ಸಲುವಾಗಿ ಮತ್ತು ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ದ್ವೇಷದ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ನವೊಮಿ ಒಸಾಕ, ‘ನನ್ನ ಉದ್ದೇಶ ಜನರು ಈ ಬಗ್ಗೆ ಮಾತನಾಡಲಿ ಅನ್ನೋದು. ಈ ಮೂಲಕ ಜಾಗೃತಿ ಮೂಡಿಸೋದು. ಈ ವಿಚಾರದ ಬಗ್ಗೆ ಹೆಚ್ಚೆಚ್ಚು ಜನರಿಗೆ ಗೊತ್ತಾದಂತೆ ಅದರಲ್ಲಿ ಅವರು ಹೆಚ್ಚು ಆಸಕ್ತರಾಗುತ್ತಾರೆ’ ಎಂದಿದ್ದಾರೆ.

 

ಮೊದಲು ಸುತ್ತು

ಎರಡನೇ ಸುತ್ತು

ಮೂರನೇ ಸುತ್ತು

ನಾಲ್ಕನೇ ಸುತ್ತು

ಫೈನಲ್

ಸೆಮಿ ಫೈನಲ್

ಕ್ವಾರ್ಟರ್ ಫೈನಲ್

-masthmagaa.com

Contact Us for Advertisement

Leave a Reply