masthmagagaa.com:

ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಆಕ್ಸ್​ಫರ್ಡ್ ಲಸಿಕೆ (Covishield) ಮತ್ತು ಭಾರತ್ ಬಯೋಟೆಕ್​ನ ‘ಕೋವಾಕ್ಸಿನ್’ ಲಸಿಕೆಗಳನ್ನ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (DCGI) ರಿಜೆಕ್ಟ್ ಮಾಡಿದೆ ಅಂತ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದ್ರೆ ಇದು ಸುಳ್ಳು. ಇದನ್ನ ನಂಬಬೇಡಿ ಅಂತ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟನೆ ಕೊಟ್ಟಿದೆ. ಇತ್ತೀಚೆಗಷ್ಟೇ ಈ ಎರಡು ಲಸಿಕೆ ಸೇರಿದಂತೆ ಅಮೆರಿಕದ ಫೈಝರ್ ಲಸಿಕೆ ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಕೋರಿ DCGIಗೆ ಮನವಿ ಸಲ್ಲಿಸಿದ್ದವು. ಇದರಲ್ಲಿ ಸೀರಂ ಮತ್ತು ಭಾರತ್ ಬಯೋಟೆಕ್​ನ ಲಸಿಕೆಗಳಿಗೆ ಅನುಮತಿ ಕೊಟ್ಟಿಲ್ಲ ಅಂತ ಕೆಲವೆಡೆ ವರದಿಯಾಗಿತ್ತು. ಆದ್ರೆ ಇದು ಸುಳ್ಳು ಅನ್ನೋದನ್ನ ಈಗ ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ.

-masthmagaa.com

Contact Us for Advertisement

Leave a Reply