ಪೈಲಟ್​ ಅನ್ನ ಕಟ್ಟಿಹಾಕಿ ವಿಮಾನದಲ್ಲಿ ಗುಂಡು ಹಾರಿಸಿದ್ರು!

masthmagaa.com:

ಕಾಲೇಜುಗಳಲ್ಲಿ ಫಸ್ಟ್​ ಇಯರ್ ಸ್ಟೂಡೆಂಟ್ಸ್​ಗೆ ಫೈನಲ್ ಇಯರ್ ಸ್ಟೂಡೆಂಟ್ಸ್ ರ್ಯಾಗಿಂಗ್ ಮಾಡೋಥರ ಸೇನೆಯಲ್ಲೂ ಹೀಗೆ ನಡೆಯುತ್ತೆ. ಅದನ್ನ ಹೇಝಿಂಗ್ ಅಂತ ಕರೀತಾರೆ. ಅಂದ್ರೆ ಸೇನೆಗೆ ಹೊಸದಾಗಿ ಸೇರೋ ಯೋಧರನ್ನ ಅಯ್ಯೋ ಅನ್ಸೋಥರ ಮಾಡೋದು. ಕೆಲವೊಮ್ಮೆ ತಮಾಷೆ ಹೋಗಿ ಅಮಾಸೆ ಆಗಿಬಿಡುತ್ತೆ. ಯೋಧರು ಮಾನಸಿಕ ಸಮಸ್ಯೆಗೆ ಒಳಗಾಗ್ತಾರೆ, ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ತಾರೆ. ಇನ್ನೂ ಕೆಲವೊಮ್ಮೆ ಹೇಝಿಂಗ್ ಮಾಡಿದವರನ್ನೇ ಮುಗಿಸಿಬಿಡ್ತಾರೆ. ವಿದೇಶಿ ಸೇನೆಯಲ್ಲಿ ಇಂಥಾ ಘಟನೆ ಹೆಚ್ಚೆಚ್ಚು ವರದಿಯಾಗ್ತಿರುತ್ತೆ. ಇದೀಗ ಇಂಥದ್ದೇ ಹೇಝಿಂಗ್ ಪ್ರಕರಣ ಫ್ರಾನ್ಸ್​ನಲ್ಲಿ ವರದಿಯಾಗಿದೆ. ಏನಾಗಿದೆ ಅಂದ್ರೆ, 2019ರಲ್ಲಿ ಫ್ರಾನ್ಸ್ ವಾಯುಸೇನೆಗೆ ಹೊಸದಾಗಿ ಸೇರಿದ ಪೈಲಟ್​ ಅನ್ನ ಉಳಿದ ಪೈಲಟ್​ಗಳು ಸೇರ್ಕೊಂಡ್​ ಟಾರ್ಗೆಟ್​ ಒಂದಕ್ಕೆ ಕಟ್ಟಿಹಾಕಿದ್ದಾರೆ. ಬಳಿಕ ಆತನ ತಲೆ ಮೇಲೆ ಖಾಲಿ ಬ್ಯಾಗ್​ ಹಾಕಿ ಏನೂ ಕಾಣದಂತೆ ಮಾಡಿದ್ದಾರೆ. ನಂತ್ರ ಫೈಟರ್ ಜೆಟ್​ ಮೂಲಕ ಆತನ ಸುತ್ತಲೂ ಗುಂಡಿನ ದಾಳಿ ನಡೆಸಿದ್ದಾರೆ. ಹೀಗೆ ಸುಮಾರು 20 ನಿಮಿಷಗಳ ಕಾಲ ಪಟ ಪಟ ಪಟಾ ಅಂತಾ ಗುಂಡು ಹಾರಿಸಿದ್ದಾರೆ. ಅವರ ಪ್ರಕಾರ ಇದು ಆತನಿಗೆ ಅಯ್ಯೋ ಅನ್ಸೋದು ಅಂತ. ಆದ್ರೆ ಸ್ವಲ್ಪ ಮಿಸ್​ ಆದ್ರೂ ಆತನ ಪ್ರಾಣವೇ ಹಾರಿ ಹೋಗ್ತಿತ್ತು. ಅದೃಷ್ಟವಶಾತ್ ಹಾಗೆ ಆಗಿಲ್ಲ. ಇದೀಗ ಘಟನೆ ನಡೆದು ಎರಡು ವರ್ಷಗಾಳದ ಬಳಿಕ ಆ ಪೈಲಟ್​ ಕೋರ್ಟ್​ಗೆ ಹೋಗಿದ್ದಾನೆ. ಜೊತೆಗೆ ಅಂದಿನ ಘಟನೆಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನ ತನ್ನ ವಕೀಲರಿಗೆ ಕೊಟ್ಟಿದ್ದಾನೆ. ಫ್ರಾನ್ಸ್​ನಲ್ಲಿ 2012ರಲ್ಲಿ ನಡೆದ ಹೇಝಿಂಗ್ ಪ್ರಕರಣದಲ್ಲಿ ಯೋಧನೊಬ್ಬ ನೀರಿನಲ್ಲಿ ಮುಳುಗಿ ಸತ್ತೇ ಹೋಗಿದ್ದ. ಇತ್ತೀಚೆಗಷ್ಟೇ ಆ ಪ್ರಕರಣದಲ್ಲಿ ಮೂವರು ಯೋಧರು ತಪ್ಪಿತಸ್ಥರು ಅಂತ ಕೋರ್ಟ್​ ತೀರ್ಪು ನೀಡಿತ್ತು. ಅದರ ಬೆನ್ನಲ್ಲೇ ಮತ್ತೊಂದು ಅಪಾಯಕಾರಿ ಹೇಝಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ರಷ್ಯಾದಲ್ಲಿ ತನ್ನನ್ನ ಅಯ್ಯೋ ಅನಿಸಿದ 8 ಸಹೋದ್ಯೋಗಿಗಳನ್ನ ಯೋಧನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದ. ಆತನಿಗೆ 24 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

-masthmagaa.com

Contact Us for Advertisement

Leave a Reply