ಎಣ್ಣೆ ಬಿಡೋಕೆ ಹೋಗಿ ಪಜೀತಿ ಮಾಡ್ಕೊಂಡ ಕುಡುಕ!

masthmagaa.com:

ಕುಡುಕನೊಬ್ಬ ಎಣ್ಣೆ ಬಿಡೋದಕ್ಕೆ ಹೋಗಿ ಪಜೀತಿ ಮಾಡಿಕೊಂಡಿದ್ದಾನೆ. ಅದು ಅಂತಿಂತ ಪಜೀತಿಯಲ್ಲ. ಇವ್ನ ಈ ಪಜೀತಿಗೆ ಡಾಕ್ಟರ್‌ ಒಂದು ಸಲ ನಡುಗಿ ಹೋಗಿದ್ದಾರೆ. ಲಿಥುಯೇನಿಯಾದ ವ್ಯಕ್ತಿಯೊಬ್ಬ ತನಗಿರುವ ಮಧ್ಯದ ಅಭ್ಯಾಸವನ್ನ ಹೇಗಾದ್ರು ಬಿಡ್ಲೇ ಬೇಕು ಅಂತ ನಿರ್ಧರಿಸಿ, ಒಂದು ತಿಂಗಳಿಂದ ಮಧ್ಯ ಕುಡಿಯೋದನ್ನ ಬಿಟ್ಟ. ಅದಕ್ಕೆ ಪ್ರತಿಯಾಗಿ ಏನ್‌ ಮಾಡಿದ್ದಾನೆ ಅಂದ್ರೆ ಸಣ್ಣ ಸಣ್ಣ ಪೀಸ್‌ ಕಬ್ಬಿಣ ತಿನ್ನೋದನ್ನ ಅಭ್ಯಾಸ ಮಾಡಿಕೊಂಡಿದ್ದಾನೆ. ಯಾಕಂದ್ರೆ ಈ ಪುಣ್ಯಾತ್ಮಂಗೆ ಕಬ್ಬಿಣ ತಿಂದ್ರೆ ಕುಡಿಬೇಕು ಅಂತ ಅನಿಸಲ್ಲ ಅಂತೆ. ಈ ಕಬ್ಬಿಣ ಎಲ್ಲ ಹೊಟ್ಟೆಯಲ್ಲಿ ಕರಗುತ್ತಾ, ಬೆಪ್ಪನಿಗೆ ಅದು ಗೊತ್ತಿಲ್ವೋ ಏನೋ.. ಒಂದಿನ ಜೋರು ಹೊಟ್ಟೆ ನೋವಾಯ್ತು ಅಂತ ಕ್ಲೇಪೆಡ ಯೂನಿವರ್ಸಿಟಿ ಆಸ್ಪತ್ರೆಗೆ ಹೋಗಿದ್ದಾನೆ. ಅವನ ಹೊಟ್ಟೆ ನೋವಿಗೆ ಕಾರಣ ಏನಿರಬಹುದು ಅಂತ ಡಾಕ್ಟರ್‌ ಅವನ ಹೊಟ್ಟೆಯ ಎಕ್ಸ್‌ ರೇ ತೆಗೆದಿದ್ದಾರೆ. ಆಗ ಅವನ ಹೊಟ್ಟೆಯಲ್ಲಿ 1 ಕೆ.ಜಿ ಯಷ್ಟು ಕಬ್ಬಿಣದ ವಸ್ತುಗಳು ಕಾಣಿಸಿಕೊಂಡಿದೆ. ನಂತ್ರ 3 ಗಂಟೆಯ ಸತತ ಆಪೇರೇಷನ್ ನಂತ್ರ ಅವನ ಹೊಟ್ಟೆಯಲ್ಲಿದ್ದ ಸ್ಕ್ರೂ, ನಟ್‌ ಬೋಲ್ಟ್‌ ಮುಂತಾದ ಕಬ್ಬಿಣದ ವಸ್ತುಗಳನ್ನು ತೆಗೆದಿದ್ದಾರೆ. ಈಗ ಆ ಮಹಾನುಭಾವ ಆರಾಮವಾಗಿದ್ದಾನೆ ಅಂತ ಡಾಕ್ಟರ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply