ಮೋದಿಗೆ ಬೈಡೆನ್‌ ತಿರಸ್ಕಾರ! ಗಣರಾಜ್ಯ ಆಹ್ವಾನ ರಿಜೆಕ್ಟ್!

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರೋ ಗಣರಾಜ್ಯೋತ್ಸವಕ್ಕೆ ಬರಲ್ಲ ಅಂತ ಅಮೆರಿಕ ಹೇಳಿದೆ. ಈ ಮೂಲಕ ಪ್ರಧಾನಿ ಮೋದಿಯವರ ಆಹ್ವಾನವನ್ನ ಅಮೆರಿಕ ರಿಜೆಕ್ಟ್‌ ಮಾಡಿದೆ. ಜೋ ಬೈಡನ್‌ ಅವ್ರನ್ನ ಜನವರಿ 26, 2024ರ ಗಣರಾಜ್ಯೋತ್ಸವ ದಿನದ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಬರಲು ಭಾರತ ಹಾಗೂ ಪ್ರಧಾನಿ ಮೋದಿ ಇನ್ವೈಟ್‌ ಮಾಡಿದ್ರು. ಹೀಗಂತ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಸೆಪ್ಟೆಂಬರ್‌ನಲ್ಲಿ ಮಾಹಿತಿ ನೀಡಿದ್ರು. ಆದ್ರೆ ಈಗ ಬರೋಕಾಗಲ್ಲ ಅಂತ ಅಮೆರಿಕ ತಿಳಿಸಿದೆ. ಮುಂದಿನ ವರ್ಷ ಅಮೆರಿಕದಲ್ಲಿ ಚುನಾವಣೆ ಇರೋದ್ರಿಂದ ಬೈಡನ್‌ಗೆ ಭಾರತ ಭೇಟಿ ನೀಡಲು ಸ್ವಲ್ಪ ಕಷ್ಟವಾಗಲಿದೆ. ಹಾಗಾಗಿ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗಿಯಾಗೋದನ್ನ ಸ್ಕಿಪ್‌ ಮಾಡಲಿದ್ದಾರೆ ಅಂತ ವೈಟ್‌ ಹೌಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ದೆ ಈ ಪ್ರವಾಸ ರದ್ದತಿಯಿಂದ ಭಾರತದಲ್ಲಿ ಜನವರಿ 27 ರಂದು ನಡೆಯಬೇಕಿದ್ದ ʻಕ್ವಾಡ್‌ ಶೃಂಗಸಭೆʼಯನ್ನ ಮುಂದೂಡುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ರಷ್ಯಾ ಅಧ್ಯಕ್ಷ ಪುಟಿನ್‌, ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಬಳಿಕ ಅಮೆರಿಕ ಅಧ್ಯಕ್ಷ ಕೂಡ ಭಾರತಕ್ಕೆ ಬರಲು ಹಿಂದೇಟು ಹಾಕಿದ್ದಾರೆ. ಯಾಕಂದ್ರೆ ಈ ಮುಂಚೆ ಜಿ20 ಸಭೆಗಾಗಿ ಪುಟಿನ್‌ ಭಾರತಕ್ಕೆ ಬರಬೇಕಿತ್ತು. ನಾನಾ ಕಾರಣಗಳನ್ನ ಕೊಟ್ಟು ಅವರು ಬಂದಿರಲಿಲ್ಲ. ಯುಕ್ರೇನ್‌ ಯುದ್ದದಲ್ಲಿ ಯುದ್ದಪರಾಧಿ ಅಂತ ಘೋಷಣೆ ಆಗಿರೋದ್ರಿಂದ ಪುಟಿನ್ ಅರೆಸ್ಟ್‌‌ ಆಗೋ ಭಯದಿಂದ ಬಂದಿಲ್ಲ ಅಂತ ಹೇಳಲಾಗಿತ್ತು. ಆದ್ರೆ ಜಿ20 ಸಭೆ ಬಳಿಕ ಅವರು ಚೀನಾಗೆ-ಸೌದಿಗೆ ಭೇಟಿ ಕೊಟ್ಟಿದ್ದಾರೆ. ಇನ್ನು ಜಿನ್‌ಪಿಂಗ್‌ ಕೂಡ ಭಾರತಕ್ಕೆ ಬರಬೇಕಿತ್ತು. ಅವರೂ ಬಂದಿರಲಿಲ್ಲ. ಗಲ್ವಾನ್‌ ಕಣಿವೆ ಸಂಘರ್ಷ ಆದ್ಮೇಲೆ ಎರಡು ದೇಶಗಳ ಉನ್ನತ ನಾಯಕರು ಪರಸ್ಪರರ ದೇಶಕ್ಕೆ ಭೇಟಿ ಕೊಟ್ಟಿಲ್ಲ. ಹೀಗಾಗಿ ಜಿನ್‌ಪಿಂಗ್‌ ಇಲ್ಲಿಗೆ ಬಂದಿಲ್ಲ ಅಂತ ಹೇಳಲಾಗಿತ್ತು. ಆದ್ರೆ ಈಗ ಅವರ ಸಾಲಿಗೆ ಬೈಡೆನ್‌ ಕೂಡ ಸೇರ್ಪಡೆಯಾಗಿದ್ದಾರೆ. ಇಲ್ಲಿ ಬೈಡೆನ್‌ ಹಿಂದೇಟು ಹಾಕಿರೋದು ಬಹಳ ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಅಮೆರಿಕ ಹಾಗೂ ಭಾರತ ವಿಶ್ವದ ಪ್ರಮುಖ ಪಾಲುದಾರ ದೇಶಗಳು. ಅಮೆರಿಕ ವಿಶ್ವದ ಹಳೇ ಪ್ರಜಾಪ್ರಭುತ್ವ ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ. ಇಬ್ರ ನಡುವೆ ಸಂಬಂಧ ವೃದ್ದಿಯಾಗೋದು ತುಂಬಾನೇ ಇಂಪಾರ್ಟೆಂಟ್‌ ಆಗುತ್ತೆ. ಆ ಬೆಳವಣಿಗೆ ಕೂಡ ಇತ್ತೀಚಿನ ದಿನಗಳಲ್ಲಿ ನಡೀತಾ ಇದೆ. ಕಳೆದ ಕೆಲ ತಿಂಗಳುಗಳ ಹಿಂದೆ ಖುದ್ದು ಪ್ರಧಾನಿ ಮೋದಿ ಅಮೆರಿಕಗೆ ಸ್ಟೇಟ್‌ ವಿಸಿಟ್‌ ಮಾಡಿದ್ರು. ಅಲ್ಲಿನ ಸಂಸತ್‌ನಲ್ಲಿ ಮಾತನಾಡಿದ್ರು. ಎರಡೂ ದೇಶಗಳು ಪ್ರಜಾಪ್ರಭುತ್ವ ಶಕ್ತಿಗಳು ಅಂತ ಒಬ್ರನ್ನ ಒಬ್ರು ಹೊಗಳಿಕೊಂಡಿದ್ರು. ಆದ್ರೆ ಈಗ ಗಣರಾಜ್ಯ ದಿನಾಚರಣೆಗೆ ಬರೋಕೆ ಬೈಡೆನ್‌ ನಿರಾರಿಸಿದ್ದಾರೆ. ಇಲ್ಲಿ ಬೈಡೆನ್‌ ಎಲೆಕ್ಷನ್‌ಗೆ ತೊಂದ್ರೆ ಯಾಗುತ್ತೆ ಅದಕ್ಕೆ ಬರಲ್ಲ ಅಂತ ಹೇಳ್ತಿದ್ದಾರೆ. ಆದ್ರೆ ಅಸಲಿಗೆ ಇದು ಕಾರಣವೇ ಅಲ್ಲ ಅನ್ನೋ ಅಭಿಪ್ರಾಯ ಕೇಳಿ ಬರ್ತಿದೆ. ಇತ್ತೀಚಿಗೆ ನಿಜ್ಜರ್‌ ಹತ್ಯೆ ಹಾಗೂ ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಪನ್ನುನ್‌ ಹತ್ಯಾಪ್ರಯತ್ನಗಳು ಬೈಡೆನ್‌ರನ್ನ ಹಿಂದೆ ಸರಿಯುವಂತೆ ಮಾಡಿವೆ ಅಂತ ಹೇಳಲಾಗ್ತಿದೆ. ಭಾರತಕ್ಕೆ ಹೋದ್ರೆ, ಸೋ ಕಾಲ್ಡ್‌ ಉದಾರವಾದಿ ಸಿದ್ದಾಂತ ಅಂತೇಳೋ ಬೈಡೆನ್‌ರ ಡೆಮಾಕ್ರೆಟಿಕ್‌ ಪಕ್ಷಕ್ಕೆ ಸಾಂಪ್ರಾದಾಯಿಕ ಮತಗಳು ಬೀಳೋದಿಲ್ಲ ಅಂತ ಅವರು ಈ ರೀತಿ ಮಾಡಿದ್ದಾರೆ ಅಂತ ಕೂಡ ವಿಶ್ಲೇಷಿಸಲಾಗ್ತಿದೆ. ಇನ್ನೊಂದ್‌ ಕಡೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ವಿರುದ್ಧದ ದೋಷಾರೋಪಣೆ ತನಿಖೆಯನ್ನ ಅಲ್ಲಿನ ಸೆನೆಟ್‌ ಶುರು ಮಾಡಿದೆ. ರಿಪಬ್ಲಿಕನ್‌ ಪಕ್ಷದ ಆರೋಪದ ಮೇರೆಗೆ ಈ ತನಿಖೆ ಶುರು ಆಗಿದೆ. ಆದ್ರೆ ರಿಪಬ್ಲಿಕನ್‌ ಪಕ್ಷ ಬೈಡೆನ್‌ ವಿರುದ್ಧದ ಆರೋಪಗಳ ಮೇಲೆ ಯಾವುದೇ ಪ್ರೂಫ್‌ ನೀಡಿಲ್ಲ. ಹೀಗಾಗಿ ದೋಷಾರೋಪಣೆ ವಿಚಾರಣೆ ಆದ್ರೂ ಅಮೆರಿಕ ಸೆನೆಟ್ ಬೈಡೆನ್‌ರನ್ನ ಅಪರಾಧಿ ಅಂತ ಪರಿಗಣಿಸಲ್ಲ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply