Yash 19 ಶೂಟ್ ಗೆ ಲಂಕೆ ಬಾಗಿಲು ಬಡಿದ ರಾಕಿಂಗ್ ಸ್ಟಾರ್!

masthmagaa.com:

ನ್ಯಾಷನಲ್ ಸ್ಟಾರ್ ಯಶ್ ಅವರು ಕೆಜಿಎಫ್, ಕೆಜಿಎಫ್ 2 ಸಕ್ಸಸ್ ನಂತರ ತಮ್ಮ ಮುಂದಿನ ಸಿನಿಮಾದ ತಯಾರಿಯಲ್ಲಿ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಸದ್ಯಕ್ಕಂತು ರಾಕಿ ಭಾಯ್‌ ಎಲ್ಲೇ ಹೋದ್ರು ಅವರ ಮೇಲೆ ಎಲ್ಲರ ಕಣ್ಣಿರತ್ತೆ. ಯಶ್‌ ಅವರ ಫ್ಯಾನ್ಸ್‌ ಅಂತೂ ಅವರ ಮುಂದಿನ ಚಿತ್ರದ ಅನೌನ್ಸ್‌ಮೆಂಟ್‌ಗಾಗಿ ಕಾಯ್ತಾ ಕೂತಿದ್ದಾರೆ. ವಿದೇಶದಲ್ಲಿ ಯಶ್ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳೋಕೆ ಫ್ಯಾನ್ಸ್ ಮುಗಿಬಿದ್ದಿದ್ದರು. ಇತ್ತೀಚಿಗಷ್ಟೇ ಯಶ್‌ ಶ್ರೀಲಂಕಾದ ಹೋಟೆಲ್‌ ಒಂದಕ್ಕೆ ಹೋಗಿದ್ದರು. ಅಲ್ಲಿ ಕೆಲಸ ಮಾಡುವ ಯಶ್‌ ಫ್ಯಾನ್‌ ಒಬ್ಬ ಅವರೊಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಂಡು ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದ. ಜೊತೆಗೆ ಆ ಹೋಟೆಲ್‌ ಸಿಬ್ಬಂದಿ ಜೊತೆಗೆ ಯಶ್‌ ತೆಗೆಸಿಕೊಂಡಿರುವ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಇನ್ನೂ ಯಶ್ ಅವರ ಮೆಗಾಬ್ಲಾಸ್ಟರ್‌ ಕೆಜಿಎಫ್ 2 ಚಿತ್ರ ಏಪ್ರಿಲ್ 14 ಕ್ಕೆಅಂದ್ರೆ ಇವತ್ತು ರಿಲೀಸ್‌ ಆಗಿ ಒಂದು ವರ್ಷ ಆಗಿದೆ. ಈಗ, ಯಶ್ 19 ಗಾಗಿ ರಾಕಿ ಭಾಯ್ ಶ್ರೀಲಂಕಾಕ್ಕೆ ಹೋಗಿದ್ದು ಎಂದು ತಿಳಿದುಬಂದಿದೆ. ಪ್ರೇಕ್ಷಕರು ಮತ್ತು ಅಭಿಮಾನಿಗಳು ಯಶ್ 19 ರ ಬಗ್ಗೆ ಸಿನಿಮಾದ ಬಗ್ಗೆ ಕ್ಯೂರಿಯಾಸಿಟಿಯಿಂದ ಕಾಯ್ತಾ ಇದಾರೆ. ಈಗ, ಯಶ್ 19 ಸಿನಿಮಾದ ಬಗ್ಗೆ ಜೂನ್‌ನಲ್ಲಿ ತಿಳಿಯಬಹುದು ಎಂಬ ಸುದ್ದಿ ಇದೆ, ಯಾಕಂದ್ರೆ ಯಶ್ ಇತ್ತೀಚೆಗೆ ಈ ಚಿತ್ರಕ್ಕಾಗಿ ಶ್ರೀಲಂಕಾಕ್ಕೆ ಹೋಗಿದ್ದರು. ಈ ಸುದ್ದಿಯನ್ನು ಶ್ರೀಲಂಕಾದ ಹೂಡಿಕೆ ಮಂಡಳಿಯ ಮುಖ್ಯಸ್ಥ ದಿನೇಶ್ ವೀರಕ್ಕೋಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ “3 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನ ಪಡೆದು ಯಶ್‌ ಅಂತ ಕೆರಸಿಕೊಳ್ಳುವ ನವೀನ್‌ ಕುಮಾರ್‌ ಶ್ರೀಲಂಕಾದಲ್ಲಿ ಭೇಟಿ ಮಾಡಿದೆ. ಶ್ರೀಲಂಕಾದಲ್ಲಿ ಅವರ ಮುಂದಿನ ಚಿತ್ರದ ಶೂಟಿಂಗ್‌ ನಡೆಯಲಿದೆ.” ಅಂತ ಟ್ಟೀಟ್‌ ಮಾಡಿದ್ದಾರೆ. “ಶೂಟಿಂಗ್‌ ಮಾತ್ರವಲ್ಲದೇ ಯಶ್‌ ಶ್ರೀಲಂಕಾದ ಟೂರಿಸಂಗೂ ಹೆಲ್ಪ್‌ ಮಾಡ್ತೀನಿ” ಅಂತ ಹೇಳಿದ್ದಾರೆ ಎಂದು ದಿನೇಶ್‌ ಬರೆದಿದ್ದಾರೆ.

ಸದ್ಯ ಯಶ್‌ ಗೋವಾ ಕೂಡ ಹೋಗಿ, ಅಲ್ಲಿ ಸಿಎಂರನ್ನ ಭೇಟಿ ಮಾಡಿದ್ದರು. ಗೋವಾ ಹೋಗಿದ್ದು ಕೂಡ ಶೂಟಿಂಗ್‌ಗಾಗಿಯೇ ಎನ್ನೋ ಗಾಳಿಸುದ್ದಿ ಇದೆ. ಗೋವಾ ಬೀಚ್‌ ಕೂಡ ಯಶ್‌ ಅವರ 19ನೇ ಸಿನಿಮಾಗೆ ಕನೆಕ್ಟ್‌ ಆಗಿರಬಹುದು ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ. ಯಶ್‌ ಅವರ 19ನೇ ಚಿತ್ರಕ್ಕೆ ಡೈರೆಕ್ಟರ್‌ ಯಾರು ಎಂಬುದು ತಿಳಿದುಬಂದಿಲ್ಲ. 19ನೇ ಸಿನಿಮಾದ ಮೂಲಕ ಡೈರೆಕ್ಷನ್‌ಗೂ ಇಳೀಬಹುದು ಅಂತ ಅಭಿಮಾನಿಗಳು ಕಾತುರದಲ್ಲಿ ಕಾಯ್ತಾ ಇದಾರೆ.

ಇನ್ನು 2018ರ ಅವಾರ್ಡ್‌ ಪ್ರೋಗ್ರಾಮ್‌ನಲ್ಲಿ ” ಇಡೀ ಭಾರತ ಕನ್ನಡ ಇಂಡಸ್ಟ್ರಿಯನ್ನ ನೋಡಿ ಚಪ್ಪಾಳೆ ತಟ್ಟುವಂತೆ ಮಾಡ್ತೀನಿ ” ಎಂದು ಮಾತು ಕೊಟ್ಟಿದ್ರು. ಅದರಂತೆ ಕೆಜಿಎಫ್‌ ರಿಲೀಸ್‌ ಆಗಿ ಇಡೀ ಭಾರತ ಮಾತ್ರವಲ್ಲದೇ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply