ಚಿತ್ರರಂಗಕ್ಕೆ ಕಾಲಿಟ್ಟ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟಿಗ!

masthmagaa.com:

ಕ್ರಿಕೆಟರ್‌ ಶುಭ್‌ಮನ್‌ ಗಿಲ್‌ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ʻಸ್ಪೈಡರ್‌ ಮ್ಯಾನ್‌: ಅಕ್ರಾಸ್‌ ದಿ ಸ್ಪೈಡರ್‌ ವರ್ಸ್‌ʼ ಸಿನಿಮಾದಲ್ಲಿ ಶುಭ್‌ಮನ್‌ ಗಿಲ್‌ ಧ್ವನಿ ಇರಲಿದೆ. ಅಂದ್ರೆ ಶುಭ್‌ಮನ್‌ ಗಿಲ್‌ ಈ ಆನಿಮೇಟೆಡ್‌ ಸಿನಿಮಾಕ್ಕೆ ಧ್ವನಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಪವಿತ್ರ ಪ್ರಭಾಕರ್‌ ಪಾತ್ರಕ್ಕೆ ಶುಭ್‌ಮನ್‌ ಧ್ವನಿ ನೀಡಿದ್ದಾರೆ.

‘ಸ್ಪೈಡರ್ ಮ್ಯಾನ್: ಅಕ್ರಾಸ್​ ದಿ ಸ್ಪೈಡರ್ ವರ್ಸ್​’ ಸಿನಿಮಾ ಇಂಗ್ಲಿಷ್ ಜೊತೆಗೆ ಹಿಂದಿ ಹಾಗೂ ಪಂಜಾಬಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿದೆ. ಇನ್ನು ಸಿನಿಮಾ ಜೂನ್‌ 2 ರಂದು ತೆರೆಕಾಣಲಿದೆ.

ಶುಭ್​ಮನ್ ಗಿಲ್ ಉತ್ತಮ ಬ್ಯಾಟಿಂಗ್ ಮೂಲಕ ತಮ್ಮ ಪವರ್ ಏನು ಎಂಬುದನ್ನು ತೋರಿಸಿದ್ದಾರೆ. ಈಗ ಅವರು ಚಿತ್ರರಂಗದಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ. ಇನ್ನು ಈ ಸಿನಿಮಾಕ್ಕೆ ಧ್ವನಿ ಕೊಟ್ಟಿದ್ದೇನೆ ಅಂತ ಸ್ವತಃ ಶುಭ್‌ಮನ್‌ ಗಿಲ್‌ ಅವರೇ ಹೇಳಿದ್ದರು. ಇನ್ನು ಸಿನಿಮಾದಲ್ಲಿ ಇವರ ಧ್ವನಿ ಯಾವ ರೀತಿ ಮೋಡಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

masthmagaa.com

Contact Us for Advertisement

Leave a Reply