ʻಕೆಜಿಎಫ್‌ 2ʼ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರನ್ನ ಸ್ವಾಗತಿಸಿದ ʻಭೈರತಿ ರಣಗಲ್’ ಚಿತ್ರತಂಡ..

masthmagaa.com:

ʻಕರುನಾಡ ಚಕ್ರವರ್ತಿʼ ಶಿವರಾಜ್‌ಕುಮಾರ್‌ ಹಾಗೂ ನಿರ್ದೇಶಕ ನರ್ತನ್‌ ಕಾಂಬಿನೇಷನ್‌ ಚಿತ್ರ ʻಭೈರತಿ ರಣಗಲ್’. ಮೊನ್ನೆಯಷ್ಟೆ ಚಿತ್ರತಂಡ ಸಿನಿಮಾದ ಪೋಸ್ಟರ್‌ ರಿವೀಲ್ ಮಾಡಿದ್ದರು. ಈ ಬೆನ್ನಲ್ಲೇ ಸಿನಿಮಾ ಬಗ್ಗೆ ಚಿತ್ರತಂಡ ಮತ್ತೊಂದು ಅಪ್‌ಡೇಟ್ ಹಂಚಿಕೊಂಡಿದೆ.
‘ಮಫ್ತಿ’ ಚಿತ್ರದಲ್ಲಿನ ಶಿವರಾಜ್‌ಕುಮಾರ್‌ ಅವರ ಭೈರತಿ ರಣಗಲ್‌ ಪಾತ್ರದಲ್ಲಿ ಅವರ ಲುಕ್‌, ಅವರನ್ನು ತೋರಿಸಿದ ಬಗೆ, ಕಾಸ್ಟ್ಯೂಮ್‌ ಎಲ್ಲವೂ ಆಗ ಟ್ರೆಂಡ್‌ ಆಗಿತ್ತು. ಇಂದಿಗೂ ಆ ಪಾತ್ರ ಶಿವಣ್ಣ ಅವರಿಗೆ ತುಂಬಾ ಇಷ್ಟ. ಸಾಕಷ್ಟು ವೇದಿಕೆಗಳಲ್ಲಿಅದನ್ನವರು ಹೇಳಿದ್ದಾರೆ. ‘ಮಫ್ತಿ’ ಮುಗಿದ ಮೇಲೆ ನರ್ತನ್‌ ಶಿವರಾಜ್‌ಕುಮಾರ್‌ ಅವರಿಗೆ ‘ಭೈರತಿ ರಣಗಲ್‌’ ಎಂಬ ಸಿನಿಮಾ ಮಾಡುತ್ತಿದ್ದಾರೆ. ನರ್ತನ್‌ ನಿರ್ದೇಶನದ ಈ ಸಿನಿಮಾವನ್ನು ಶಿವಣ್ಣ ಅವರು ತಮ್ಮ ಹೋಮ್‌ ಬ್ಯಾನರ್‌ ಗೀತಾ ಪಿಕ್ಚರ್ಸ್‌ನಲ್ಲಿಯೇ ನಿರ್ಮಾಣ ಮಾಡುತ್ತಿದ್ದಾರೆ.
ಇತ್ತೀಚೆಗೆ ಶಿವರಾಜ್‌ಕುಮಾರ್ ಅವರ ಹೋಮ್ ಬ್ಯಾನರ್ ಗೀತಾ ಪಿಕ್ಚರ್ಸ್‌ನಲ್ಲಿ ʻವೇದʼ ಸಿನಿಮಾ ರಿಲೀಸ್ ಆಗಿತ್ತು. ಇದು ಆ ಬ್ಯಾನರ್‌ನ ಮೊದಲ ಸಿನಿಮಾ. ಕನ್ನಡದಲ್ಲಿ ತೆರೆಕಂಡಿದ್ದ ‘ವೇದ’ ನಂತರ ‘ಶಿವ ವೇದ’ ಹೆಸರಿನಲ್ಲಿ ತೆಲುಗಿಗೂ ಡಬ್ ಆಗಿತ್ತು. ಇದೀಗ ‘ಭೈರತಿ ರಣಗಲ್‌’ ಮೂಲಕ ಗೀತಾ ಶಿವರಾಜ್‌ಕುಮಾರ್ ಅವರು ಮತ್ತೊಂದು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ಈ ಚಿತ್ರಕ್ಕೆ `ಕೆಜಿಎಫ್ 2′ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು ಚಿತ್ರತಂಡ ತಿಳಿಸಿದೆ. ಪೋಸ್ಟರ್ ಒಂದನ್ನು ರಿಲೀಸ್‌ ಮಾಡುವ ಮೂಲಕ ರವಿ ಬಸ್ರೂರು ಅವರನ್ನು ತಂಡಕ್ಕೆ ಸ್ವಾಗತಿಸಿದೆ. ಈ ಹಿಂದೆ ಇದೇ ತಂಡದ ಜೊತೆ ಕೈ ಜೋಡಿಸಿ `ಮಫ್ತಿ’ಗೂ ಸಂಗೀತ ನಿರ್ದೇಶನ ಮಾಡಿ ಗೆದ್ದಿದ್ದ ರವಿ ಬಸ್ರೂರು ಈಗ `ಭೈರತಿ ರಣಗಲ್’ ಸಿನಿಮಾಗೂ ಸಂಗೀತ ನಿರ್ದೇಶನ ಮಾಡಲಿದ್ದಾರೆ.
ಇನ್ನೂ ʻಭೈರತಿ ರಣಗಲ್ʼ ಸಿನಿಮಾ ಪಂಚ ಭಾಷೆಯಲ್ಲಿ ಬರೋದು ಪಕ್ಕಾ ಆಗಿದೆ,ಚಿತ್ರತಂಡ ಪ್ಯಾನ್​ ಇಂಡಿಯಾ ಲೆವಲ್​ಗೆ ರಿಲೀಸ್ ಆಗೋಕೆ ಸಿದ್ಧತೆ ಮಾಡಿಕೊಳ್ತಿದೆ ಎನ್ನಲಾಗುತ್ತಿದೆ.

-masthmagaa.com

Contact Us for Advertisement

Leave a Reply