ಅಮೆರಿಕವನ್ನು ಜಾಡಿಸಿದ ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ!

masthmagaa.com:

ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಹೀದ್ ಯೂಸೂಫ್ ಅಮೆರಿಕಕ್ಕೆ ಪರೋಕ್ಷವಾಗಿ ಮಾತಿನ ಬಾಣ ಹೂಡಿದ್ದಾರೆ. ಸಂದರ್ಶನವೊಂದ್ರಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಈಗ ತನ್ನ ಹಿತಾಸಕ್ತಿಯ ರಕ್ಷಣೆಗೆ ಎದ್ದು ನಿಲ್ಲಲಿದೆ. ಭಾವನಾತ್ಮಕವಾಗಿ ಅಲ್ಲ.. ವ್ಯಾವಹಾರಿಕವಾಗಿ ತನ್ನ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲಿದೆ. ಪಾಕಿಸ್ತಾನ ಇನ್ಮುಂದೆ ಯಾವುದೇ ಒಂದು ದೇಶದ ಬೇಸ್ ರೀತಿ ಕೆಲಸ ಮಾಡೋದಿಲ್ಲ. ಅದೇ ರೀತಿ ಮುಂಬರುವ ದಿನಗಳಲ್ಲಿ ಯಾವುದೇ ದೇಶದ ಏರ್​ಬೇಸ್ ಆಗಿಯೂ ಇರೋದಿಲ್ಲ ಅಂತ ತಿಳಿಸಿದ್ದಾರೆ. ಬರೀ ಅಮೆರಿಕ ಅಲ್ಲ.. ಯಾವುದೇ ದೇಶದ ಜೊತೆಗಿನ ಸ್ಥಿತಿ ಪಾಕಿಸ್ತಾನದ ಹಿತಾಸಕ್ತಿಗೆ ಅನುಗುಣವಾಗಿ ಇಲ್ಲ ಅಂತಾದ್ರೆ ಪಾಕಿಸ್ತಾನ ಮುಂದುವರಿಯಲ್ಲ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply