ಎಲ್ಲಾ ಧರ್ಮದಲ್ಲೂ ಅಸಮಾನತೆ ಇದೆ, ನಾನು ಅದರ ವಿರೋಧಿ: ಚೇತನ್‌ ಅಹಿಂಸಾ !

masthmagaa.com:

ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್‌ ಹೇಳಿರುವ ಮಾತಿಗೆ ಎಲ್ಲಾ ಕಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಚೇತನ್‌ ಅಹಿಂಸಾ ಅವರು ಉದಯನಿಧಿ ಅವರ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.

“ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಸನಾತನ ಧರ್ಮದ ಬಗ್ಗೆ ಉದಯನಿಧಿ ಯಾವ ವ್ಯಾಪ್ತಿಯಲ್ಲಿ ಹೇಳಿದ್ದಾರೆ ಅನ್ನೋದನ್ನು ನೋಡಬೇಕು. ನಾನು ಸನಾತನ ಧರ್ಮದ ವಿರೋಧಿಯಲ್ಲ. ಸನಾತನ ಧರ್ಮದಲ್ಲಿ ಇರುವಂತ ಅಸಮಾನತೆಯ ವಿರೋಧಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಈ ಮೂರೂ ಧರ್ಮದಲ್ಲೂ ಅಸಮಾನತೆ ಇದೆ. ಕೇಂದ್ರ ಸರ್ಕಾರ ತರಲು ಹೊರಟಿರುವ ಏಕರೂಪ ನಾಗರಿಕ ಸಂಹಿತೆ ವಿಚಾರವಾಗಿ ನನ್ನ ಸಹಮತವಿದೆ. ಅದು ಸಮಾಜದ ಸಿವಿಲ್ ಕೋಡ್ ಆಗಿರಬೇಕು. ಕಮ್ಯೂನಿಸ್ಟ್‌ಗಳು ಅದನ್ನು ವಿರೋಧಿಸಬಹುದು. ಆದರೆ ಈ ವಿಚಾರದಲ್ಲಿ ನಮ್ಮ ಬೆಂಬಲ ಇದೆ. ಕಾಂಗ್ರೆಸ್‌ನವರು ಐದು ಗ್ಯಾರಂಟಿ ತಂದು ತೇಪೆ ಹೆಚ್ಚುವ ಕೆಲಸ ಮಾಡುತ್ತಿದ್ದಾರೆ. ಅದನ್ನು ದೇವರಾಜ ಅರಸು ಆಡಳಿತಕ್ಕೆ ಹೋಲಿಸಬೇಡಿ ಎಂದಿದ್ದಾರೆ. ಎಸ್ಸಿ ಎಸ್ಟಿಗಳ ಅನುದಾನ ಗ್ಯಾರಂಟಿಗೆ ಬಳಸಿಕೊಂಡು ಪಕ್ಷದವರು ಮೋಸ ಮಾಡಿದ್ದಾರೆ. ಸಿದ್ದರಾಮಯ್ಯ ರೈತರ ಭೂಮಿಯನ್ನು ಗಣಿಗಾರಿಕೆಗೆ ಕೊಟ್ಟಿದ್ದಾರೆ. ಅವತ್ತು ಗಣಿಗಾರಿಕೆ ವಿರುದ್ಧವೇ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ದರು” ಅಂತ ಟೀಕೆ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply