IPL ಇತಿಹಾಸದಲ್ಲಿ ಈ ರೀತಿ ಔಟ್​ ಆದ ಉದಾಹರಣೆನೇ ಇಲ್ಲ! ಇದೇ ಫಸ್ಟ್..

masthmagaa.com:

ಬ್ಯಾಟರ್‌ ಒಬ್ಬ ಔಟ್‌ ಆಗೋಕು ಮುಂಚೇನೆ ಯಾವುದೇ ಇಂಜ್ಯುರಿ ಆಗದೇ ರಿಟೈರ್ಡ್‌ ಔಟ್‌ ಅಂತ ಘೋಷಿಸಿ ಪೆವಿಲಿಯನ್‌ಗೆ ಹೋದ ಘಟನೆ ಐಪಿಎಲ್​ನಲ್ಲಿ ಮೊದಲ ಬಾರಿಗೆ ನಡೆದಿದೆ. ರಾಜಸ್ಥಾನ ಮತ್ತು ಕೋಲ್ಕತ್ತಾ ತಂಡಗಳ ನಡುವಿನ ನಿನ್ನೆಯ ಪಂದ್ಯದಲ್ಲಿ ಹೀಗಾಗಿದೆ. ರಾಜಸ್ಥಾನ್‌ ರಾಯಲ್ಸ್‌ ಬ್ಯಾಟಿಂಗ್‌ ಮಾಡ್ತಿದ್ದಾಗ 18ನೇ ಓವರ್​ನಲ್ಲಿ ಬ್ಯಾಟರ್‌ ಅಶ್ವಿನ್‌ ಈ ರೀತಿ ಮಾಡಿದ್ದು ಎಲ್ಲರಿಗೂ ಅಚ್ಚರಿ ಮತ್ತು ಸಂಶಯ ಮೂಡಿಸಿದೆ. ಆದ್ರೆ ತನಗಿಂತ ಚೆನ್ನಾಗಿ, ವೇಗವಾಗಿ ರನ್ ಗಳಿಸೋ ಬ್ಯಾಟರ್‌ ಇನ್ನೂ ಇದ್ದಿದ್ರಿಂದ ಅಶ್ವಿನ್‌ ಈ ರೀತಿ ಮಾಡಿದ್ದಾರೆ. ಜೊತೆಗೆ ಇದು ನಿಯಮ ಬಾಹಿರ ಏನಲ್ಲ. ಅಶ್ವಿನ್​ ಬಳಿಕ ರಿಯಾನ್​ ಪರಾಗ್​ ಬ್ಯಾಟಿಂಗ್​ಗೆ ಬಂದ್ರು.

-masthmagaa.com

Contact Us for Advertisement

Leave a Reply