ಅವಧಿಗೂ ಮುನ್ನವೇ ಸೇನೆ ವಾಪಸ್ ಕರೆಸಿಕೊಂಡ ಟರ್ಕಿ!

masthmagaa.com:

ಟರ್ಕಿ ಆಗಸ್ಟ್​ 31ರ ಡೆಡ್​ಲೈನ್​​ಗೂ ಮುನ್ನವೇ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದೆ. ನ್ಯಾಟೋ ಪಡೆಯ ಭಾಗವಾಗಿ ಇದ್ರ 500 ಮಂದಿ ಸೈನಿಕರು ಅಫ್ಘಾನಿಸ್ತಾನದಲ್ಲಿದ್ದಾರೆ. ಕಾಬೂಲ್​​​ನಲ್ಲಿ ಸ್ಥಳಾಂತರ ಪ್ರಕ್ರಿಯೆ ದಿನದಿಂದ ದಿನಕ್ಕೆ ಕಷ್ಟವಾಗ್ತಿದ್ರೂ ಇಂಥಾ ಹೊತ್ತಲ್ಲಿ ತನ್ನ ಸೇನೆ ಹಿಂತೆಗೆದುಕೊಳ್ಳೋದಾಗಿ ಟರ್ಕಿ ಘೋಷಿಸಿದೆ. ಕೊಟ್ಟ ಕೆಲಸವನ್ನು ಪೂರ್ಣಗೊಳಿಸಿ ಟರ್ಕಿ ಯೋಧರು ಹೆಮ್ಮೆಯೊಂದಿಗೆ ತಾಯ್ನಾಡಿಗೆ ಮರಳುತ್ತಿದ್ದಾರೆ ಟರ್ಕಿ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply