ಮಹಿಳಾ ಟಿಕ್​​ಟಾಕರ್​​​ ಮೇಲೆ ಮುಗಿಬಿದ್ದ 300-400 ಜನ ಮಾಡಿದ್ದೇನು?

masthmagaa.com:

ಪಾಕಿಸ್ತಾನದಲ್ಲಿ ಮಹಿಳಾ ಟಿಕ್​ಟಾಕರ್ ಒಬ್ಬರು ಗಂಭೀರ ಆರೋಪ ಮಾಡಿದ್ದಾರೆ. ನಾನು ಮತ್ತು 6 ಜನ ಗೆಳೆಯರು ಸ್ವಾತಂತ್ರ್ಯ ದಿನದ ಅಂಗವಾಗಿ ಮಿನಾರ್ ಎ ಪಾಕಿಸ್ತಾನ್ ಬಳಿ ಹೋಗಿ ಫೋಟೋ ತೆಗೆದುಕೊಳ್ತಿದ್ವಿ. ಈ ವೇಳೆ ಅಲ್ಲಿಗೆ ಬಂದ ಮುನ್ನೂರು ನಾನೂರು ಜನರ ಗುಂಪು ನಮ್ಮ ಮೇಲೆ ದಾಳಿ ನಡೆಸಿದೆ. ನಮ್ಮನ್ನು ಹಿಡಿದು ಎಳೆದಾಡಿ, ಬಟ್ಟೆ ಹರಿದು, ಮೇಲೆ ಎಸೆದಿದ್ದಾರೆ. ನಾವು ತಪ್ಪಿಸಿಕೊಳ್ಳಲು ಯತ್ನಿಸಿದ್ರೂ ಸಾಧ್ಯವಾಗಲಿಲ್ಲ. ನನ್ನ ಕಿವಿಯೋಲೆ, ನನ್ನ ಸ್ನೇಹಿತನ ಮೊಬೈಲ್, 15 ಸಾವಿರ ರೂಪಾಯಿ ದುಡ್ಡನ್ನು ಕೂಡ ಕಸಿದುಕೊಂಡ್ರು ಅಂತ ಹೇಳಿಕೊಂಡಿದ್ದಾರೆ. ಸದ್ಯ ಲಾಹೋರ್​ನ ಲಾರಿ ಅಡ್ಡಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸ್ತಿದ್ದಾರೆ.

-masthmagaa.com

Contact Us for Advertisement

Leave a Reply