masthmagaa.com:

ತೆರಿಗೆ ವಂಚನೆ ಪ್ರಕರಣ ಸಂಬಂಧ ಉದ್ಯಮಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ಅವರ ರಾಬರ್ಟ್​ ವಾದ್ರಾ ಕಚೇರಿ ಮೇಲೆ ಇತ್ತೀಚೆಗೆ ಇಡಿ ದಾಳಿ ನಡೆದಿತ್ತು, ಆದಾಯ ತೆರಿಗೆ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ರು. ಈ ಬಗ್ಗೆ ಇವತ್ತು ಮಾತನಾಡಿರುವ ರಾಬರ್ಟ್ ವಾದ್ರಾ, ‘ನನ್ನ ಕಚೇರಿಯಿಂದ ಬರೋಬ್ಬರಿ 23,000 ದಾಖಲೆಗಳನ್ನ ತೆಗೆದುಕೊಂಡು ಹೋಗಿದ್ದಾರೆ. ನನ್ನ ಕಚೇರಿಯಲ್ಲಿರುವ ಮಾಹಿತಿಗಿಂತ ಹೆಚ್ಚಿನ ಮಾಹಿತಿ ಅವರ ಬಳಿ ಇದೆ. ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸಿದ್ದೇನೆ. ನಾನು ಯಾವುದೇ ತೆರಿಗೆಯನ್ನ ವಂಚನೆ ಮಾಡಿಲ್ಲ’ ಅಂತ ಹೇಳಿದ್ದಾರೆ.

ಇಂಗ್ಲೆಂಡ್​​​ನಲ್ಲಿ ರಾಬರ್ಟ್​ ವಾದ್ರಾ ಶಸ್ತ್ರಾಸ್ತ್ರ ಡೀಲರ್ ಸಂಜಯ್ ಭಂಡಾರಿಯವರ ಮೂಲಕ ಆಸ್ತಿಯನ್ನ ಖರೀದಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. 2009ರಲ್ಲಿ ನಡೆದ ಪೆಟ್ರೋಲಿಯಂ ಡೀಲ್​​​​​​​​ನ ಕಿಕ್​​ಬ್ಯಾಕ್​​ ರೂಪದಲ್ಲಿ ವಾದ್ರಾ ಆ ಆಸ್ತಿಯನ್ನ ಪಡೆದಿದ್ದಾರೆ ಅನ್ನೋ ಆರೋಪವಿದೆ. ಇದ್ರ ಜೊತೆಗೆ 2018ರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸುತ್ತಿದೆ.

-masthmagaa.com

Contact Us for Advertisement

Leave a Reply