ಭಾರತೀಯ ಕ್ರಿಕೆಟ್‌ ತಂಡಕ್ಕೆ ಕಳಪೆ ಆಹಾರ ನೀಡಿದ ಆರೋಪ..! ಐಸಿಸಿಗೆ ದೂರು?

masthmagaa.com:

ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಸರಿಯಾದ ಊಟ ಕೊಟ್ಟಿಲ್ಲ ಅಂತ ಭಾರತೀಯ ಕ್ರಿಕೆಟ್‌ ಮಂಡಳಿ ಐಸಿಸಿಗೆ ದೂರು ನೀಡಿದೆ ಅಂತ ಮೂಲಗಳು ತಿಳಿಸಿವೆ. ಸಿಡ್ನಿಯಲ್ಲಿ ತರಬೇತಿ ಮಾಡಿದ ಬಳಿಕ ಆಟಗಾರರಿಗೆ ನೀಡಿದ ಆಹಾರ ಸರಿಯಾಗಿರಲಿಲ್ಲ..ಕೇವಲ ಸ್ಯಾಂಡ್ವಿಚ್‌ ಮಾತ್ರ ನೀಡಲಾಗಿತ್ತು. ಅದೂ ಕೋಲ್ಡ್‌ ಆಗಿತ್ತು. ಇದರ ಜೊತೆಗೆ ಒಂದಷ್ಟು ಹಣ್ಣುಗಳನ್ನ ಮಾತ್ರ ನೀಡಲಾಗಿತ್ತು.ಆದರೆ ಆಟಗಾರರು ಊಟ ಮಾಡೋಕೆ ಬಯಸಿದ್ರು. ಹೀಗಾಗಿ ಕೆಲವು ಆಟಗಾರರು ಹೋಟೆಲ್‌ನಲ್ಲಿರೋ ಊಟವನ್ನೇ ತಿನ್ನೋಕೆ ಹೋದ್ರು ಅಂತ ಹೇಳಲಾಗಿದೆ. ಅಂದ್ಹಾಗೆ ವಿಶ್ವಕಪ್‌ ನಡೆಯೋ ಟೈಂನಲ್ಲಿ ICCನೇ ಫುಡ್‌ ಅರೆಂಜ್ಮೆಂಟ್‌ ಎಲ್ಲ ನೋಡಿಕೊಳ್ಳುತ್ತೆ. ಆದ್ರೆ ಕೆಲವು ಬಾರಿ ಪಂದ್ಯಗಳು ನಡೀತಿರೋ ಅಥವಾ ಆಯೋಜಕ ದೇಶವೇ ಆ ಜವಾಬ್ದಾರಿಯನ್ನ ವಹಿಸಿಕೊಳ್ಳುತ್ತೆ. ಇನ್ನು ಈ ಕುರಿತು ಬಿಸಿಸಿಐ ಅಧಿಕಾರಿಯೊಬ್ರು ಮಾತನಾಡಿದ್ದಾರೆ. ʼದ್ವಿಪಕ್ಷೀಯ ಸರಣಿಯಲ್ಲಿ, ಆತಿಥೇಯ ದೇಶ ಅಡುಗೆಯ ಜವಾಬ್ದಾರಿಯನ್ನು ಹೊಂದಿರುತ್ತೆ. ಅವರು ಯಾವಾಗಲೂ ಬಿಸಿಯಾಗಿರೋ ಭಾರತೀಯ ಊಟವನ್ನೇ ನೀಡುತ್ತಾರೆ. ಆದರೆ ಐಸಿಸಿ ಮಾತ್ರ ಎಲ್ಲ ದೇಶದ ಆಟಗಾರರಿಗೂ ಒಂದೇ ಊಟ ಕೊಡುತ್ತೆ. ಎರಡು ಗಂಟೆಗಳ ಕಾಲ ಟ್ರೈನಿಂಗ್‌ ಮಾಡಿದ ಆಟಗಾರರಿಗೆ ಆವಕಾಡೊ, ಟೊಮೆಟೊ ಮತ್ತು ಸೌತೆಕಾಯಿ ಜೊತೆಗೆ ಕೋಲ್ಡ್ ಸ್ಯಾಂಡ್‌ವಿಚ್ ತಿನ್ನೋಕೆ ಆಗಲ್ಲ ಅಂತ ಹೇಳಿದ್ದಾರೆ. ಇನ್ನು ಆಹಾರದ ಹೊರತಾಗಿ ಕೂಡ ಐಸಿಸಿ ನಡೆಯ ಬಗ್ಗೆ ಭಾರತೀಯ ಅಟಗಾರರು ಅಸಮಾಧಾನ ಹೊಂದಿದ್ದಾರೆ ಅಂತ ಹೇಳಲಾಗ್ತಿದೆ. ಟೀಂ ಇಂಡಿಯಾ ಅಭ್ಯಾಸ ಮಾಡುವ ಸ್ಥಳ ಅವರು ತಂಗಿರೋ ಹೋಟೆಲ್‌ನಿಂದ 42 ಕಿಲೋಮೀಟರ್ ದೂರದಲ್ಲಿದೆ. ಹೀಗಾಗಿ ಇದು ಕೂಡ ರೋಹಿತ್ ಪಡೆಯ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟು ದೂರ ಪ್ರಯಾಣ ಮಾಡಿ ಆ ಬಳಿಕ ಅಭ್ಯಾಸ ಮಾಡಬೇಕೆಂದರೆ. ಅದಾದ ಬಳಿಕ ವಾಪಾಸ್‌ ಬರ್ಬೇಕು ಅಂದ್ರೆ ಟಯಡ್‌ ಆಗೇ ಆಗುತ್ತೆ. ಹೀಗಾಗಿ ಆಟಗಾರರು ಇದಕ್ಕೂ ಬೇಸರ ವ್ಯಕ್ತಪಡಿಸಿದ್ದಾರೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply