“ಸೈಫ್ ಅಲಿ ಖಾನ್ ಜೊತೆ ಮದುವೆ ಆಗೋಕೆ ಇದೇ ಕಾರಣ”: ಕರೀನಾ ಕಪೂರ್

masthmagaa.com:

ಬಾಲಿವುಡ್‌ನಲ್ಲಿ ಅತ್ಯಂತ ಬ್ಯೂಟಿಫುಲ್‌ ಮತ್ತು ಪ್ರತಿಭಾವಂತ ನಟಿಯರಲ್ಲಿ ಕರೀನಾ ಕಪೂರ್ ಕೂಡ ಒಬ್ಬರು. ಇವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ಹಾರ್ಡ್‌ವರ್ಕ್‌ ಮತ್ತು ಅಟೆನ್ಷನ್‌ನಿಂದ ಇಂಡಸ್ಟ್ರಿಗೆ ಎಂಟ್ರಿ ಆದಾಗಿಂದ ಹಿಡಿದೂ ಇಲ್ಲಿಯ ತನಕವೂ ಕೂಡ ಮಹಿಳೆಯರಿಗೆ ಮಾದರಿಯಾದವರು. ಚಿಕ್ಕ ವಯಸ್ಸಿನಲ್ಲಿಯೇ ನಟಿಯಾದ ಇವರು ತಮ್ಮ ವೃತ್ತಿಜೀವನದಲ್ಲಿ ಉತ್ತುಂಗದಲ್ಲಿದ್ದಾರೆ. ಸೈಫ್‌ ಅಲಿ ಖಾನ್ ಅವರನ್ನು ಮದುವೆಯಾದರು ಅಲ್ಲದೇ ಪ್ರಗ್ನೇನ್ಸಿ ಟೈಮಲ್ಲಿ ಮತ್ತುಅದರ ನಂತರವೂ ಕೂಡ ಅವರು ತಮ್ಮ ಕೆಲಸವನ್ನು ಕಂಟಿನ್ಯೂ ಮಾಡಿದಾರೆ. ಕರೀನಾ ಕಪೂರ್ 2000 ರಲ್ಲಿ ಅಭಿಷೇಕ್ ಬಚ್ಚನ್ ಜೊತೆಗೆ “ರೆಫ್ಯೂಜಿ” ಚಿತ್ರದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಇಂಡಸ್ಟ್ರಿಗೆ ಬಂದು ಕೇವಲ 12 ವರ್ಷದಲ್ಲೇ ಸೈಫ್‌ ಅಲಿಖಾನ್‌ಗೆ ಎರಡನೇ ಹೆಂಡತಿಯಾಗಿ ಮದುವೆಯಾದರು. ಒಳ್ಳೆ ಕೆರಿಯರ್‌ ಮತ್ತು ಫ್ಯೂಚರ್‌ ಇದ್ದಂತ ನಟಿ ಅಷ್ಟು ಬೇಗ ಅದ್ರಲ್ಲೂ 2 ನೇ ಹೆಂಡಿತಿಯಾಗಿ ಯಾಕೆ ಹೋದ್ರು ಅಂತ ಅಭಿಮಾನಿಗಳೆಲ್ಲ ಮಾತಾಡ್ತಿದ್ರು. ಈ ಒಂದು ವಿಷಯಕ್ಕೆ ಸಂಬಂಧಿಸಿ ಕರೀನಾ ಸಂದರ್ಶನವೊಂದರಲ್ಲಿ ತಾನ್‌ ಏಕೆ ಮದುವೆಗೆ ಒಪ್ಪಿಕೊಂಡೆ ಅನ್ನೊದರ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಸೈಫ್‌ ಅಲಿ ಖಾನ್‌ಗೆ ಇದು ಎರಡನೇ ಮದುವೆಯಾಗಿತ್ತು, ಸೈಫ್‌ ಅವರು ಮೊದಲು ನಟಿ ಅಮೃತಾ ಸಿಂಗ್ ಅವರನ್ನು ಅಕ್ಟೋಬರ್ 1991 ರಲ್ಲಿ ವಿವಾಹವಾದರು. ಮಗಳು ಸಾರಾ ಅಲಿ ಖಾನ್‌ ಮತ್ತು ಒಬ್ಬ ಮಗ ಕೂಡ ಇದ್ರು. 13 ವರ್ಷಗಳ ಕಾಲ ಜೊತೆಯಲ್ಲಿದ್ದ ಜೋಡಿ 2004ರಲ್ಲಿ ಡಿವೋರ್ಸ್‌ ಆದರು.

ಇನ್ನು ಕರೀನಾ ಕಪೂರ್‌ ಮತ್ತು ಶಾಹಿದ್‌ ಕಪೂರ್‌ ಅವರ ಲವ್‌ ಕಾಂಟ್ರವರ್ಸಿ ಎಲ್ಲರಿಗೂ ಗೊತ್ತಿರೊ ವಿಷಯಾನೇ. ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಮೊದಲು ಕಾಣಿಸಿಕೊಂಡಿದ್ದು ‘ಫಿದಾ’ ಚಿತ್ರದಲ್ಲಿ. ಆ ಸಿನಿಮಾ ಅಭಿಮಾನಿಗಳಿಗೆ ಅಷ್ಟೇನು ಇಷ್ಟ ಆಗಿರಲಿಲ್ಲ. ನಂತರ, ಶಾಹಿದ್ ಮತ್ತು ಕರೀನಾ ಒಟ್ಟಿಗೆ ಕಾಣಿಸಿಕೊಂಡಿದ್ದು ’36 ಚೀನಾ ಟೌನ್’, ‘ಮಿಲೇಂಗೆ ಮಿಲೇಂಗೆ’, ‘ಚುಪ್ ಚುಪ್ ಕೆ. ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ತೆರೆಯ ಮೇಲೆ ಮತ್ತು ಹೊರಗೆ ಮೇಡ್‌ ಫಾರ್‌ ಈಚ್‌ ಅದರ್‌ ಅನ್ನುವಂತ ಜೋಡಿಯಾಗಿದ್ರು ಅನ್ನೋದು ಅವರ ಅಭಿಮಾನಿಗಳ ಅಭಿಪ್ರಾಯ.

ಹೀಗಿರುವಾಗ ಅವರಿಬ್ಬರ ನಡುವೆ ಬ್ರೇಕ್‌ಅಪ್‌ ಕೂಡ ಆಗತ್ತೆ. ಈ ಬ್ರೇಕ್‌ಅಪ್‌ವಿಷಯದ ಕುರಿತು ಶಾಹಿದ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. “ನಮ್ಮಿಬ್ಬರ ವ್ಯಕ್ತಿತ್ವಗಳು ತುಂಬಾಮೆ ಚೇಂಜ್‌ ಇತ್ತು, ಅವಳು ತುಂಬಾ ಮಾತನಾಡುತ್ತಾಳೆ ಮತ್ತು ಒಂದ್‌ ಸೆಕೆಂಡ್‌ಲ್ಲಿ ಡಿಸಿಷನ್‌ಗಳನ್ನ ತೆಗೆದುಕೊಳ್ಳುತ್ತಾಳೆ. ನಾನು ಇದಕ್ಕೆ ಅಪೋಸಿಟ್‌ ಆಗಿದ್ದೆ,ನಾವಿಬ್ಬರೂ ಒಟ್ಟಿಗೆ ಇರಬೇಕು ಅಂದ್ರೆ ನಮ್ಮಿಬ್ಬರ ಮ್ಯೂಚ್‌ವಲ್‌ ಅಂಡರ್‌ಸ್ಟಾಂಡಿಂಗ್‌ ತುಂಬಾನೇ ಮುಖ್ಯ” ಅಂತ ಹೇಳಿದ್ದರು. ಕರೀನಾ ಅವರ ಈ ಲವ್‌ ಅಫೇರ್‌ನ್ನ ಅವರ ತಾಯಿ ಬಬಿತಾ ಮತ್ತು ಅವರ ಸಹೋದರಿ ಕರಿಷ್ಮಾಇಬ್ಬರೂ ಇಷ್ಟ ಪಟ್ಟಿರಲಿಲ್ಲಅಂತ ವರದಿಯಲ್ಲಿ ಪ್ರಕಟವಾಗಿತ್ತು. ಇದು ಕೂಡ ಅವರ ಬ್ರೇಕ್‌ಅಪ್‌ಗೆ ಒಂದು ಕಾರಣವಾಗಿರಬಹುದು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಸತತ 5 ವರ್ಷಗಳ ಕಾಲ ಲವ್‌ ಅಫೆರ್‌ ಹೊಂದಿದ್ದ ಜೋಡಿ 2006ರಲ್ಲಿ ಬ್ರೆಕ್‌ಅಪ್‌ ಮಾಡಿಕೊಳ್ಳುವ ಮೂಲಕ ದೂರವಾದ್ರು.
ಶಾಹಿದ್ ಮೀರಾ ರಜಪೂತ್‌ರನ್ನ ಮದುವೆಯಾಗಿದ್ದಾರೆ. ಅಲ್ಲದೇ ಈ ಜೋಡಿಗೆ ಮಿಶಾ ಮತ್ತು ಜೈನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಕರೀನಾ ಮತ್ತು ಸೈಫ್ ಅಲಿ ಖಾನ್ 2003ರಲ್ಲಿ ತೆರೆಕಂಡ LOC ಕಾರ್ಗಿಲ್ ಮತ್ತು 2006 ರಲ್ಓಂಲಿ ತೆರೆಕಂಡ ಓಂಕಾರ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು, ಆದರೆ 2008 ರ ತಶನ್ ಚಿತ್ರದ ಸೆಟ್‌ಗಳಲ್ಲಿ ಅವರು ಪರಸ್ಪರ ಪ್ರೀತಿಸುತ್ತಿದ್ದರು ಅಂತ ರೂಮರ್ಸ್‌ ಹಬ್ಬಿತ್ತು. ಸೈಫ್‌ ಅಲಿ ಖಾನ್‌ ಮದುವೆಗೆ ಪ್ರಪೋಸ್‌ ಮಾಡಿದ ವಿಷಯವನ್ನ ಸಂದರ್ಶನವೊಂದರಲ್ಲಿ ಕರೀನಾ ಹೇಳಿಕೊಂಡಿದ್ದರು. ” ಚಿತ್ರ ಶೂಟಿಂಗ್‌ಗೆ ಪ್ಯಾರಿಸ್‌ಗೆ ಹೋದಂತ ಸಂದರ್ಭದಲ್ಲಿ ಸೈಫ್‌ ಅವರು ಪ್ರಪೋಸ್‌ ಮಾಡಿದ್ರು, ನನಗೆ ಟೈಮ್‌ ಕೊಡಿ ಅಂತ ಹೇಳಿದ್ದೆ, 2 ದಿನ ಆದಮೇಲೆ ನಾನು ಮದುವೆಗೆ ಒಕೆ ಅಂತ ಹೇಳಿದೆ” ಅಂತ ನಟಿ ಹೇಳಿದ್ದರು. ನಂತರ 2012ರಲ್ಲಿ ಕರೀನಾ ಸೈಫ್‌ ಅಲಿಖಾನ್‌ ಅವರೊಂದಿಗೆ ಮದುವೆಯಾದರು.

2016ರಲ್ಲಿ ಇವರಿಗೆ ಮೊದಲನೇ ಮಗು ಜನನವಾಗತ್ತೆ, ಅವನಿಗೆ ತೈಮೂರ್‌ ಅಂತ ಹೆಸರಿಡಲಾಗತ್ತೆ. ಆಕ್ರಮಣಕಾರರ ಹೆಸರನ್ನು ತಮ್ಮ ಮೊದಲ ಮಗುವಿಗೆ ಇಟ್ಟಿದ್ದಕ್ಕಾಗಿ ಕಾಂಟ್ರವರ್ಸಿಯನ್ನ ಇವರು ಫೇಸ್‌ ಮಾಡಬೇಕಾಯಿತು. ತೈಮೂರ್ 1398 ರಲ್ಲಿ ಭಾರತವನ್ನು ಆಕ್ರಮಿಸಿದ ಪರ್ಷಿಯಾ ಮತ್ತು ಮಧ್ಯ ಏಷ್ಯಾದಲ್ಲಿ ತೈಮೂರ್ ಸಾಮ್ರಾಜ್ಯದ ಸಂಸ್ಥಾಪಕ. ಇಂತವನ ಹೆಸರನ್ನ ಮಗನಿಗೆ ಇಟ್ಟಿದ್ದಾರೆ ಅನ್ನೋ ಕಾಂಟ್ರವರ್ಸಿ ಶುರುವಾದ ಬೆನ್ನಲ್ಲೇ, ಸಂದರ್ಶನವೊಂದರಲ್ಲಿ ಇದರ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. “ಈ ಹೆಸರುಗಳು ಯಾವುದೂ ಕೂಡ ಬೇರೆ ಉದ್ದೇಶ ಇಟ್ಕೊಂಡು ಹೆಸರಿಟ್ಟಿದ್ದಲ್ಲ. ಈ ಹೆಸರು ನಮಗೆ ಮತ್ತು ನಮ್ಮ ಕುಟುಂಬಕ್ಕೆ ತುಂಬಾನೆ ಇಷ್ಟ ಆಗಿದೆ. ಈ ರೀತಿ ಕಾಂಟ್ರವರ್ಸಿ ಆಗತ್ತೆ ಅಂತ ನಾವೂ ಸಹ ಅಂದ್ಕೊಂಡಿರಲಿಲ್ಲ” ಎಂದು ಹೇಳಿದ್ದರು.

ಇನ್ನು ತಮ್ಮ ಮೊದಲನೇ ಪ್ರಗ್ನೇನ್ಸಿಯಲ್ಲಿ ರ‍್ಯಾಂಪ್‌ ವಾಕ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೇ ಇವರು ತೈಮೂರ್‌ ಹುಟ್ಟಿದ 2 ತಿಂಗಳಲ್ಲೇ ಕೆಲಸಕ್ಕೆ ಹಾಜರಾಗಿದ್ರು, ಫೆಬ್ರವರಿ 2021 ರಲ್ಲಿ ಅವರ ಎರಡನೇ ಮಗು ಜೆಹ್‌ ಹುಟ್ಟಿದ ನಂತರ ಕೇವಲ 1 ತಿಂಗಳಲ್ಲಿ ತಮ್ಮ ಕೆಲಸವನ್ನ ಮತ್ತೆ ಶುರು ಮಾಡಿದ್ರು. ಹಾಗಾಗಿ ಇವರನ್ನ ಮಹಿಳೆಯರಿಗೆ ರೋಲ್‌ ಮಾಡೆಲ್‌ ಅಂತ ಹೇಳಲಾಗತ್ತೆ.ಇತ್ತೀಚೆಗೆ ನಡೆದ ಮಾಧ್ಯಮದ ಸಂದರ್ಶನದಲ್ಲಿ ಅವರು ತಮ್ಮ ಕೆಲವು ನಿರ್ಧಾರಗಳ ಬಗ್ಗೆ ಕೂಡ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಕರೀನಾ ತಾಯ್ತನ, ಗಂಡ ಹೆಂಡತಿ ಸಂಬಂಧ, ಸ್ಟಾರ್‌ಡಮ್‌ನ ಪ್ರೆಷರ್‌ ಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ. ಇವರ ಈ ಮಾತುಗಳು ಎಲ್ಲರಿಗೂ ಇಷ್ಟ ಆಯಿತು, ಅಲ್ಲದೇ ಇವರ ಮಾತಿಗೆ ಬಾಲಿವುಡ್‌ ಅಂಗಳದಿದಂದ ಪ್ರಶಂಸೆಯ ಸುರಿಮಳೆಯೇ ಕೇಳಿ ಬಂತು. ತಮ್ಮ ಮಕ್ಕಳಾದ ಜೆಹ್ ಮತ್ತು ತೈಮೂರ್ ಬಗ್ಗೆ ಮಾತನಾಡಿದ ಕರೀನಾ, 2 ವರ್ಷದ ಜೆಹ್ ಸ್ವಲ್ಪ ಜಾಸ್ತಿ ಮಾತಾಡೋದು, ಜಾಸ್ತಿ ತಿನ್ನೋದು, ಆಟವಾಡದೋ ಇದೆಲ್ಲವನ್ನ ಇಷ್ಟಪಡುತ್ತಾನೆ. ಮತ್ತು 6 ವರ್ಷದ ತೈಮೂರ್ ಸ್ವಲ್ಪ ಶಾಂತ ಮತ್ತು ತುಂಬಾ ಸೆನ್ಸಿಟೀವ್‌ ಪರ್ಸನ್‌. ಈ ಇಬ್ಬರು ಮಕ್ಕಳು ಬೇರೆ ಬೇರೆ ವ್ಯಕ್ತಿತ್ವವನ್ನ ಹೊಂದಿದ್ದಾರೆ.

ತಮ್ಮ ಕೆರಿಯರ್‌ನಲ್ಲಿ ಟಾಪ್‌ ನಟಿಯಾಗಿದ್ದಾಗ ಇವರು ಸೈಫ್‌ ಅಲಿ ಖಾನ್‌ರನ್ನ ಎರಡನೇ ಮದುವೆಯಾದ ವಿಷಯದ ಬಗ್ಗೆಯೂ ಕೂಡ ಕರೀನಾ ಮಾತನಾಡಿದ್ದಾರೆ. “ಇದು ನನ್ನ ಸ್ವಂತ ನಿರ್ಧಾರದಿಂದ ನಾನು ಮದುವೆ ಆಗಿದ್ದು, ಅದು ಕೂಡ ಯಾವುದೇ ನಟಿ ಮದುವೆಯಾಗದಿದ್ದಾಗ” ಎಂದು ಹೇಳಿದರು. ಅಲ್ಲದೇ “ಇಂದು, ಅನೇಕ ನಟಿಯರು ಮದುವೆಯಾಗುತ್ತಿದ್ದಾರೆ! ಮದುವೆಯಾದ ಮೇಲೂ ಕೂಡ ಕೆಲಸ ಮಾಡೋದು ತುಂಬಾನೆ ಕೂಲ್‌ ಅನ್ಸತ್ತೆ. ಮೊದಲು ಹೇಗಿತ್ತು ಅಂದರೆ ಮಕ್ಕಳು ಆದರೆ ಕೆಲಸ ಮಾಡೋಕೆ ಕಷ್ಟ ಅನ್ನುವಂತ ಸಿಚುವೇಷನ್‌ ಇತ್ತು ಆದರೆ ಈಗ ಅದು ಸಡನ್‌ ಆಗಿ ಚೇಂಜ್‌ ಆಗಿದೆ. ಮಕ್ಕಳು ಆದಮೇಲೂ ಕೂಡ ನೀವು ಕೆಲಸ ಮಾಡಬಹುದು ಅನ್ನುವಂತ ಯೋಚನೆಗಳು ಬಂದಿದೆ. ನನಗೆ ಇಷ್ಟ ಇರುವಂತ ಮತ್ತು ನಂಬಿಕೆ ಇರುವಂತ ವಿಷಯಗಳನ್ನು ಯಾವಾಗಲೂ ಮಾಡ್ತೇನೆ” ಎಂದು ಹೇಳಿದರು.

-masthmagaa.com

Contact Us for Advertisement

Leave a Reply