ಈ ವರ್ಷ ಅಂಬಾರಿ ಹೊರುವ ಜವಾಬ್ದಾರಿ ಯಾರದ್ದು ಗೊತ್ತಾ?

masthmagaa.com:

ಈ ಬಾರಿಯ ದಸರಾದಲ್ಲಿ 750 ಕೆ.ಜಿಯ ಚಿನ್ನದ ಅಂಬಾರಿಯನ್ನ 55 ವರ್ಷದ ಅಭಿಮನ್ಯು ಹೊರಲಿದ್ದಾನೆ. ಚಿನ್ನದ ಅಂಬಾರಿ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು, ಈ ಸಲ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಇನ್ನು ಸಾಮಾನ್ಯವಾಗಿ 14 ಆನೆಗಳು ದಸರಾ ಆಚರಣೆಯಲ್ಲಿ ಪಾಲ್ಗೊಳ್ಳುತ್ತವೆ. ಆದರೆ ಈಗ ಕೊರೊನಾ ಸಂದರ್ಭದಲ್ಲಿ ಕೇವಲ ಎಂಟು ಮಾತ್ರ ಭಾಗವಹಿಸುತ್ತವೆ.
ಅಭಿಮನ್ಯು ಕಳೆದ 19 ವರ್ಷಗಳಿಂದ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿದ್ದು, ಅತಿ ಹೆಚ್ಚು ದಸರಾ ಆಚರಣೆಗಳಲ್ಲಿ ಭಾಗವಹಿಸಿದ ದಾಖಲೆ ಹೊಂದಿದ್ದಾನೆ. ಅಂದಹಾಗೆ ದಸರಾ ಅಕ್ಟೋಬರ್‌ 7 ರಿಂದ ಆರಂಭವಾಗಿ ಅಕ್ಟೋಬರ್‌ 15 ರಂದು ವಿಜಯದಶಮಿಯೊಂದಿಗೆ ಮುಕ್ತಾಯವಾಗುತ್ತೆ.

-masthmagaa.com

Contact Us for Advertisement

Leave a Reply