ಬ್ರೆಜಿಲ್​​ನಲ್ಲಿ ಕೋವ್ಯಾಕ್ಸಿನ್ ಡೀಲ್ ಹಂಗಾಮಾ! ಅಧ್ಯಕ್ಷರ ವಿರುದ್ಧವೇ ತನಿಖೆ

masthmagaa.com:

ಬ್ರೆಜಿಲ್​ನಲ್ಲಿ ಕೋವ್ಯಾಕ್ಸಿನ್ ಡೀಲ್ ವಿಚಾರವಾಗಿ ಹಂಗಾಮಾ ಶುರುವಾಗಿದೆ. ಸಾವಿರಾರು ಜನ ರಸ್ತೆಗೆ ಇಳಿದು, ವ್ಯಾಕ್ಸಿನ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಅನ್ನೋ ಆರೋಪ ಎದುರಿಸುತ್ತಿರುವ ಅಧ್ಯಕ್ಷ ಜೇರ್ ಬೊಲ್ಸೊನಾರೋ ವಿರುದ್ಧ ಘೋಷಣೆ ಕೂಗಿದ್ದಾರೆ. ಸತತ 3 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಬ್ರೆಜಿಲ್ ಸುಪ್ರೀಂಕೋರ್ಟ್​​ ಕೂಡ ಜೇರ್ ಬೋಲ್ಸೊನಾರೋ ವಿರುದ್ಧ ತನಿಖೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ. ಅಂದಹಾಗೆ ಕಳೆದ ಫೆಬ್ರವರಿಯಲ್ಲಿ ಭಾರತ್ ಬಯೋಟೆಕ್ ಸಂಸ್ಥಯಿಂದ 2 ಕೋಟಿ ಡೋಸ್ ಲಸಿಕೆ ಖರೀದಿಸಲು, 31 ಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ಬೊಲ್ಸೊನಾರೋ ಸಹಿ ಹಾಕಿದ್ರು. ಇದ್ರಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಅನ್ನೋದು ಆರೋಪ.

-masthmagaa.com

Contact Us for Advertisement

Leave a Reply