ಅಮೆರಿಕದಲ್ಲಿ ಹೈಡ್ರಾಮಾ: ಟ್ರಂಪ್​ ಬೆಂಬಲಿಗರಿಂದ ಪ್ರತಿಭಟನೆ, ಹಲವರ ಬಂಧನ

masthmagaa.com:

ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ನಡೆಯುತ್ತಿರುವ ಹೈಡ್ರಾಮಾ ಮುಗಿಯೋ ಲಕ್ಷಣ ಕಾಣ್ತಿಲ್ಲ. ಸೋಲನ್ನು ಒಪ್ಪಿಕೊಳ್ಳದ ಡೊನಾಲ್ಡ್ ಟ್ರಂಪ್ ಡೆಮಾಕ್ರೆಟಿಕ್ ಪಕ್ಷದ ಜೋ. ಬೈಡೆನ್​ಗೆ ಅಧಿಕಾರ ಹಸ್ತಾಂತರ ಮಾಡಲು ಹಿಂದೇಟು ಹಾಕ್ತಿದ್ದಾರೆ. ಇದೀಗ ಟ್ರಂಪ್ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸಲು ಶುರು ಮಾಡಿದ್ದಾರೆ. ವಾಷಿಂಗ್ಟನ್​ ಡಿಸಿಯಲ್ಲಿ ನಡೆದ ಪ್ರತಿಭಟನೆ ವೇಳೆ ‘ಚುನಾವಣಾ ಅಕ್ರಮ ನಿಲ್ಲಿಸಿ’, ‘ಟ್ರಂಪ್ ಬೆಸ್ಟ್​ ಪ್ರೆಸಿಡೆಂಟ್ ಎವರ್’, ‘ವಿ ವಾಂಟ್ ಟ್ರಂಪ್’ ಅನ್ನೋ ಘೋಷಣೆಗಳನ್ನ ಕೂಗಿದ್ದಾರೆ. ಹಲವೆಡೆ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಈ ಹಿನ್ನೆಲೆ 20ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ಪೊಲೀಸರು ಬಂಧಿಸಿದ್ದಾರೆ. ಚಾಕು ಇರಿತದಿಂದಾಗಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಮತ್ತೊಂದುಕಡೆ ಟ್ರಂಪ್​ ಪರ ಮೆರವಣಿಗೆ ನಡೆಸುತ್ತಿದ್ದವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ವರದಿ ಮಾಡದ ಮಾಧ್ಯಮಗಳ ವಿರುದ್ಧ ಸಿಟ್ಟಾಗಿರೋ ಡೊನಾಲ್ಡ್​ ಟ್ರಂಪ್, ಮಾಧ್ಯಮಗಳು ಸೈಲೆಂಟಾಗಿವೆ, ದೇಶದಲ್ಲಿ ಸ್ವತಂತ್ರ ಪತ್ರಿಕೋದ್ಯಮ ನಾಶವಾಗಿದೆ ಅಂತ ಸರಣಿ ಟ್ವೀಟ್ ಮಾಡಿದ್ದಾರೆ. ಇದೆಲ್ಲಾ ಒಂದುಕಡೆಯಾದ್ರೆ ದೀಪಾವಳಿ ಹಿನ್ನೆಲೆ ಡೊನಾಲ್ಡ್ ಟ್ರಂಪ್, ಜೋಸೆಫ್ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಶುಭಾಶಯ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply