ಕೊರೋನಾ: ಜಗತ್ತಿನಲ್ಲಿ ಇವತ್ತು ಏನೆಲ್ಲಾ ಬೆಳವಣಿಗೆ ಆಯ್ತು ಗೊತ್ತಾ?

masthmagaa.com:

ಕೊರೋನಾಗೆ ಸಂಬಂಧಿಸಿದಂತೆ ಜಗತ್ತಿನಲ್ಲಿ ಇವತ್ತು ಏನೆಲ್ಲಾ ಬೆಳವಣಿಗೆ ಆಗಿದೆ ಅಂತ ಕ್ವಿಕ್​ ಆಗಿ ನೋಡ್ಕೊಂಡ್​ ಬರಣ.
– ನ್ಯೂಜಿಲ್ಯಾಂಡ್​​ನ ಅತಿದೊಡ್ಡ ನಗರವಾದ ಅಕ್​​ಲ್ಯಾಂಡ್​​ನಲ್ಲಿ ಕೊರೋನಾ ನಿರ್ಬಂಧಗಳನ್ನ ಸಡಿಲಗೊಳಿಸಲಾಗಿದೆ. ಕಳೆದ ಮೂರು ತಿಂಗಳಿಂದ ಬಂದ್ ಆಗಿದ್ದ ಅಂಗಡಿ ಮುಂಗಟ್ಟು ಮತ್ತು ಮಾಲ್​ಗಳನ್ನ ಓಪನ್ ಮಾಡಲು ಅವಕಾಶ ನೀಡಿದ ಹಿನ್ನೆಲೆ ಜನ ಅವುಗಳತ್ತ ಮುಗಿಬಿದ್ದರು. ಕೆಲವೊಂದುಕಡೆ ಅಂಗಡಿ ಮುಂಗಟ್ಟು ಮುಂದೆ ಕ್ಯೂ ನಿಂತಿದ್ದು ಕಂಡುಬಂತು. ಲೈಬ್ರರಿ, ಮ್ಯೂಸಿಯಂ ಮತ್ತು ಝೂಗಳನ್ನ ಕೂಡ ಸಾರ್ವಜನಿಕರಿಗೆ ಓಪನ್​ ಮಾಡಲಾಗಿದೆ. ಕಳೆದ ವರ್ಷ ಕೊರೋನಾ ಕಂಟ್ರೋಲ್​ ಮಾಡಿದ್ದ ನ್ಯೂಜಿಲ್ಯಾಂಡ್​​ನಲ್ಲಿ ಈ ವರ್ಷ ಡೆಲ್ಟಾ ರೂಪಾಂತರಿ ಕಾಟ ಕೊಡ್ತಿದೆ.
– ಚೀನಾದ ಸಿಚುವಾನ್​ ಪ್ರಾಂತ್ಯದ ರಾಜಧಾನಿ ಚೆಂಗ್ಡು ನಗರದ ನ್ಯೂ ಸೆಂಚುರಿ ಗ್ಲೋಬಲ್​ ಸೆಂಟರ್​ ಕಟ್ಟಡದಲ್ಲಿ ಒಂದೇ ದಿನ 30 ಸಾವಿರ ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಕೊರೋನಾ ಟೆಸ್ಟ್​ಗೆ ಹೆದರಿ ಕೆಲವರು ಓಡಿ ಹೋಗೋಕೆ ಪ್ರಯತ್ನಪಟ್ಟರು. ಅವರನ್ನ ಕೂಡ ಹಿಡಿದು ಟೆಸ್ಟ್ ಮಾಡಲಾಗಿದೆ. ಆದ್ರೆ ಅಷ್ಟೂ ಕೊರೋನಾ ಪರೀಕ್ಷೆಯಲ್ಲಿ ಒಂದೇ ಒಂದು ಪಾಸಿಟಿವ್ ಬಂದಿಲ್ಲ ಅಂತ ಚೀನಾ ಮಾಧ್ಯಮಗಳು ವರದಿ ಮಾಡಿವೆ. ಕೆಲ ದಿನಗಳ ಹಿಂದೆ ಶಾಂಘೈನ ಡಿಸ್ನಿಲ್ಯಾಂಡ್​​ನಲ್ಲಿ ಇದೇಥರ ದೊಡ್ಡ ಮಟ್ಟದಲ್ಲಿ ಕೊರೋನಾ ಪರೀಕ್ಷೆ ನಡೆಸಲಾಗಿತ್ತು.
– ಒಂದೇ ಒಂದು ಕೊರೋನಾ ಕೇಸ್​ ಬರ್ಬಾರ್ದು ಅನ್ಕೊಂಡಿರೋ ಚೀನಾದಲ್ಲಿ ಕಳೆದ 24 ಗಂಟೆಯಲ್ಲಿ 54 ಹೊಸ ಕೊರೋನಾ ಕೇಸ್​ ದೃಢಪಟ್ಟಿದೆ. ಇದರಲ್ಲಿ 39 ಸ್ಥಳೀಯ ಕೇಸ್​ಗಳಾದ್ರೆ, 15 ವಿದೇಶದಿಂದ ಬಂದವಾಗಿವೆ.
– ಆಗ್ನೇಯ ಏಷ್ಯಾದಲ್ಲಿ ಬರೋ ವಿಯೆಟ್ನಾಂ ದೇಶ ಭಾರತದ ಕೋವಾಕ್ಸಿನ್​​ ಲಸಿಕೆಗೆ ಅನುಮೋದನೆ ನೀಡಿದೆ. ಈ ಮೂಲಕ ವಿಯೆಟ್ನಾಂನಲ್ಲಿ ಅನುಮೋದನೆ ಪಡೆದ 9ನೇ ಲಸಿಕೆ ಎನಿಸಿಕೊಂಡಿದೆ ಕೋವಾಕ್ಸಿನ್​. ಹೈದ್ರಾಬಾದ್​ ಮೂಲದ ಭಾರತ್ ಬಯೋಟೆಕ್​ ಕಂಪನಿ ಅಭಿವೃದ್ಧಿಪಡಿಸಿರೋ ಕೋವಾಕ್ಸಿನ್​​ ಲಸಿಕೆಗೆ ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಗ್ರೀನ್ ಸಿಗ್ನಲ್​ ಕೊಟ್ಟಿತ್ತು.

-masthmagaa.com

Contact Us for Advertisement

Leave a Reply