ಪೂರ್ವ ಲಡಾಕ್ ವಿವಾದ! ಭಾರತ- ಚೀನಾ ಮಾತುಕತೆ

masthmagaa.com:

3 ತಿಂಗಳ ಗ್ಯಾಪ್ ಬಳಿಕ ಭಾರತ ಮತ್ತು ಚೀನಾದ ನಡುವೆ ಪೂರ್ವ ಲಡಾಖ್ ವಿವಾದ ಸಂಬಂಧ ಮಾತುಕತೆ ಶುರುವಾಗಿದೆ. 14ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ಇದಾಗಿದೆ. ಲೈನ್ ಆಫ್ ಆಕ್ಚುವಲ್ ಕಂಟ್ರೋಲ್​​ನಿಂದ ಚೀನಾದ ಒಳಗಿರೋ ಚುಶುಲ್​-ಮೋಲ್ಡೋದಲ್ಲಿ ಬೆಳಗ್ಗೆ 9.30ಗೆ ಈ ಸಭೆ ಶುರುವಾಗಿದೆ. ಭಾರತದ ಪರವಾಗಿ ಲೆಫ್ಟಿನೆಂಟ್ ಜನರಲ್ ಅನಿಂದ್ಯಾ ಸೇನ್​​ಗುಪ್ತಾ ಸಭೆಯಲ್ಲಿ ಭಾಗಿಯಾಗಿದ್ದಾರೆ. ಹಾಟ್​ ಸ್ಪ್ರಿಂಗ್ ಪ್ರದೇಶದಲ್ಲಿ ಸೇನೆ ಹಿಂತೆಗೆತ ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಬಹುದು ಅಂತ ಮೂಲಗಳು ತಿಳಿಸಿದೆ. ಅಂದಹಾಗೆ ಡೆಮ್​ಚಾಕ್​​, ಡೆಪ್ಸಂಗ್ ಮತ್ತು ಹಾಟ್​ಸ್ಪ್ರಿಂಗ್​​ನಲ್ಲಿ ಇನ್ನೂ ಕೂಡ ಸೇನೆ ಹಿಂತೆಗೆತ ಆಗಿಲ್ಲ. ಈ ವಿವಾದ ಶುರುವಾಗಿ ಈಗಾಗಲೇ 20 ತಿಂಗಳೇ ಉರುಳಿ ಹೋಗಿವೆ.

-masthmagaa.com

Contact Us for Advertisement

Leave a Reply