ರಷ್ಯಾ ಶಾಂತಿ ಒಪ್ಪಂದದ ಬಗ್ಗೆ ಝೆಲೆನ್​ಸ್ಕಿಗೆ ಡೌಟು!

masthmagaa.com:

ರಷ್ಯಾ ಸೇನೆ ಹಿಂತೆಗೆದುಕೊಳ್ಳೋ ಬಗ್ಗೆ ಸ್ವಲ್ಪ ಡೌಟಲ್ಲೇ ಮಾತಾಡಿರೋ ಝೆಲನ್‌ಸ್ಕಿ, ಶಾಂತಿ ಮಾತುಕತೆಯಿಂದ ಒಳ್ಳೆ ಸಿಗ್ನಲ್‌ಗಳೇ ಬಂದಿರ್ಬಹುದು ಆದ್ರೆ ನಮ್ಮ ಎಚ್ಚರಿಕೆಯಲ್ಲಿ ನಾವಿರ್ತೀವಿ ಅಂತ ಹೇಳಿದ್ದಾರೆ. ತಡರಾತ್ರಿ ವಿಡೀಯೋ ಒಂದ್ರಲ್ಲಿ ಮಾತಾಡಿರೋ ಅವ್ರು, ಪರಿಸ್ಥಿತಿ ಇನ್ನೂ ನಾರ್ಮಲ್‌ ಆಗಿಲ್ಲ. ರಷ್ಯಾ ಸೇನೆ ಇನ್ನೂ ದಾಳಿ ಮಾಡೋ ಎಲ್ಲ ಸಾಧ್ಯತೆ ಇದೆ. ಮಾತುಕತೆಯಿಂದ ಸಕಾರಾತ್ಮಕ ಸಂದೇಶಗಳೇ ಬಂದಿರಬಹುದು.. ಆದ್ರೆ ರಷ್ಯಾ ಸೇನೆ ಶೆಲ್ಲಿಂಗ್‌ ಮಾಡೋದು, ಬಾಂಬ್‌ ಹಾಕೋದು ಏನು ನಿಲ್ಸಿಲ್ಲ. ಅವ್ರ ಮಾತು ಕ್ರಿಯೆಯಾಗಿ ಬದ್ಲಾಗಬೇಕು. ಅಂದ್ರೆ ಹೇಳಿದ್ದನ್ನು ಮಾಡಬೇಕು.. ಇಷ್ಟು ದಿನದ ಯುದ್ಧದಲ್ಲಿ ನಾವು ಪಾಠ ಕಲ್ತೀದಿವಿ, ನಮ್ಮ ರಕ್ಷಣೆಗೆ ನಾವು ನಿಯೋಜಿಸಿರೋ ಸೇನೆಯನ್ನ ನಾವು ಕಡಿಮೆ ಮಾಡಲ್ಲ ಅಂತ ಹೇಳಿದ್ದಾರೆ. ಜೊತೆಗೆ ಯುದ್ಧದಲ್ಲಿ ಆಸ್ತಿ-ಪಾಸ್ತಿ ನಷ್ಟ ಆದವ್ರಿಗೆ ಪರಿಹಾರ ನೀಡೋಕೆ ಯುಕ್ರೇನ್‌ ಸರ್ಕಾರ ಹೊಸ ಯೋಜನೆಯೊಂದನ್ನ ಲಾಂಚ್‌ ಮಾಡಿರೋದಾಗಿ ಅನೌನ್ಸ್‌ ಮಾಡಿದ್ದಾರೆ. ಇನ್ನು ಆ ಕಡೆ ರಷ್ಯಾ ಕೂಡ ಕಿಯೇವ್‌ ಮತ್ತು ಉತ್ತರ ಯುಕ್ರೇನ್‌ನಲ್ಲಿ ಸೇನೆ ಕಡಿಮೆ ಮಾಡ್ತಾ ಇರೋದು ಡಿ-ಎಸ್ಕಲೇಷನ್‌ ಅಷ್ಟೇ ಕದನವಿರಾಮ ಏನಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply