ರಷ್ಯಾ ನಂಬಕ್ಕಾಗಲ್ಲ ಎಂದಿದ್ಯಾಕೆ ಪಾಶ್ಚಿಮಾತ್ಯ ದೇಶಗಳು?

masthmagaa.com:

ರಷ್ಯಾದ ನಡೆ ಬಗ್ಗೆ ಪಾಶ್ಚೀಮಾತ್ಯ ದೇಶಗಳು ಸಂದೇಹ ವ್ಯಕ್ತಪಡಿಸಿದ್ದು, ರಷ್ಯಾ ಬೇರೆ ಕಡೆ ತನ್ನ ಬಲವನ್ನ ಕೇಂದ್ರಿಕರಿಸೋಕೆ ಈ ತರ ಮಾಡ್ತಿರಬಹದು ಅಂತ ಹೇಳಿವೆ. ಈ ಬಗ್ಗೆ ಮಾತಾಡಿರೋ ಪೆಂಟಗಾನ್‌ ವಕ್ತಾರ ಜಾನ್‌ ಕಿರ್ಬಿ, ರಷ್ಯಾ ತನ್ನ ಸೇನೆಯನ್ನ ಹಿಂದಕ್ಕೆ ತಗೋತಾ ಇಲ್ಲ ಬದ್ಲಾಗಿ ಅಲ್ಲೇ ಬೇರೆ ಕಡೆ ಪೋಸ್ಟ್‌ ಮಾಡ್ತಾ ಇದೆ, ರಷ್ಯಾದ ಸ್ವಲ್ಪ ಸೇನೆ ಕಿಯೆವ್‌ ಇಂದ ಮೂವ್‌ ಆಗ್ತಾ ಇರೋದನ್ನ ನೋಡಿದೀವಿ. ಆದ್ರೆ ಅದನ್ನ ವಾಪಸ್‌ ತಗೋಳ್ತಾ ಇದೆ ಅಂತ ಹೇಳಕ್ಕೆ ಬರಲ್ಲ. ಬೇರೆ ಕಡೆಗೆ ನಿಯೋಜಿಸೋ ಉದ್ದೇಶದಿಂದಲೂ ಮೂವ್‌ ಮಾಡ್ತಾ ಇರ್ಬೋದು ಅಂತ ಹೇಳಿದ್ದಾರೆ. ಇನ್ನು ಅಮೆಇಕ ಅಧ್ಯಕ್ಷ ಜೋ ಬೈಡನ್‌ ಕೂಡ, ಮೊದ್ಲು ಅವ್ರು ಹೇಳಿದ್ದನ್ನ ಅವ್ರೇ ಫಾಲೋ ಮಾಡ್ತಾರೋ ಇಲ್ವೋ ನೋಡೋಣ ಅಂತ ಹೇಳಿದ್ದಾರೆ. ಆ ಕಡೆ ಬ್ರಿಟನ್‌ನ ಡಿಫೆನ್ಸ್‌ ಸೆಕ್ರಟರಿ, ಬೆನ್‌ ವಾಲೇಸ್‌ ಮಾತಾಡಿ, ರಷ್ಯಾ ನಾವು ನಿನ್ನೆ-ಮೊನ್ನೆ ಹುಟ್ಟಿರ್ಬೇಕು ಅಂತ ಅಂದ್ಕೊಂಡಿದೆ. ರಷ್ಯಾದ ಮಾತು ನಂಬಬಾರದು, ಅದ್ರ ಮಾತುಗಳು ಕಾರ್ಯಗತವಾದಾಗಲೇ ನಂಬಬಹುದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply