ಮತ್ತೆ ಮೂರು ದೇಶಗಳಿಗೆ ಹರಡಿದ ಕೊರೋನಾ ಮಹಾಮಾರಿ

ಜಗತ್ತಿನೆಲ್ಲೆಡೆ ಇದುವರೆಗೆ ಮೂರು ಸಾವಿರಕ್ಕೂ ಹೆಚ್ಚು ಜನರನ್ನ ಬಲಿ ಪಡೆದಿರೋ ಕೊರೋನಾ ಮಹಾಮಾರಿ ಮತ್ತೆ ಮೂರು ದೇಶಗಳಿಗೆ ಹರಡಿದೆ. ಇಂಡೋನೇಷ್ಯಾ, ಜೆಕ್​ ಗಣರಾಜ್ಯ ಹಾಗೂ ಡೋಮಿನಿಕನ್ ಗಣರಾಜ್ಯಗಳಲ್ಲಿ ಸೋಮವಾರ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. ಇಂಡೋನೇಷ್ಯಾದಲ್ಲಿ 64 ವರ್ಷದ ವೃದ್ಧೆ ಹಾಗೂ ಆಕೆಯ 34 ವರ್ಷದ ಮಗಳಲ್ಲಿ ಸೋಂಕು ಪತ್ತೆಯಾಗಿದೆ.

ಭಾನುವಾರ ಅಮೆರಿಕ, ಆಸ್ಟ್ರೇಲಿಯಾ ಹಾಗೂ ಥಾಯ್​ಲ್ಯಾಂಡ್​ನಲ್ಲಿ ಕೊರೋನಾ ವೈರಸ್​ಗೆ ಬಲಿಯಾದ ಮೊದಲ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಮಹಾಮಾರಿ ಇದುವರೆಗೆ 2,915 ಜನರನ್ನ ಬಲಿ ಪಡೆದಿದೆ. ಬೇರೆ ದೇಶಗಳಲ್ಲಿ 140 ಜನರು ಮೃತಪಟ್ಟಿದ್ದಾರೆ.

 

Contact Us for Advertisement

Leave a Reply