ಜಮ್ಮುವಿನಲ್ಲಿ ಮತ್ತೆ ಡ್ರೋನ್​ ಮತ್ತು ಮಹತ್ವದ ಬೆಳವಣಿಗೆಗಳು!

masthmagaa.com:

ಜಮ್ಮು ಏರ್​ಫೋರ್ಸ್​ ಸ್ಟೇಷನ್​​ ಮೇಲೆ ದಾಳಿ ನಡೆದ ಬಳಿಕ ಡ್ರೋನ್​​​​​​ಗಳ ಹಾರಾಟ ಜಾಸ್ತಿಯಾಗುತ್ತಲೇ ಇದೆ. ಇವತ್ತು ಜಮ್ಮುವಿನ ಕಾಲುಚಾಕ್ ಮತ್ತು ಕುಂಜ್ವಾನಿ ಪ್ರದೇಶದಲ್ಲಿ ಮತ್ತೆರಡು ಡ್ರೋನ್​​ಗಳು ಕಾಣಿಸಿಕೊಂಡಿವೆ. ಈ ಮೂಲಕ 4 ದಿನಗಳಲ್ಲಿ 7 ಡ್ರೋನ್​​ಗಳು ಪತ್ತೆಯಾದಂತಾಗಿದೆ. ಇನ್ನು ಇಂಥಾ ಡ್ರೋನ್​​ಗಳನ್ನು ಪತ್ತೆಹಚ್ಚಲು ಅಗತ್ಯವಾದ ವ್ಯವಸ್ಥೆ ಮತ್ತು ತಂತ್ರಜ್ಞಾನವನ್ನು ಭಾರತ ಗುರುತಿಸಿದ್ದು, ಸದ್ಯದಲ್ಲೇ ಇಂಥಾ ದಾಳಿಗಳನ್ನು ತಡೆಯಲು ಅಗತ್ಯವಾದ ಒಂದ ನೀತಿಯನ್ನು ಜಾರಿಗೆ ತರುವ ಸಾಧ್ಯತೆ ಇದೆ ಅಂತ ಮೂಲಗಳು ತಿಳಿಸಿವೆ. ನಿನ್ನೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ ಅಂತ ಗೊತ್ತಾಗಿದೆ. ಅಂದಹಾಗೆ ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​​, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹಸಚಿವ ಅಮಿತ್ ಶಾ ಭಾಗಿಯಾಗಿದ್ರು. ಜಮ್ಮು ಏರ್​​ಫೋರ್ಸ್​ ಸ್ಟೇಷನ್​​​ನಲ್ಲಿ ಈಗಾಗಲೇ ಆ್ಯಂಟಿ ಡ್ರೋನ್ ಸಿಸ್ಟಂ ಮತ್ತು ಜಾಮರ್​​ಗಳನ್ನು ಅಳವಡಿಸಲಾಗಿದೆ.

ಇದ್ರ ನಡುವೆ ಆರ್ಮಿ ಕಮಾಂಡರ್​ ಒಬ್ರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಡ್ರೋನ್​​ಗಳನ್ನೆಲ್ಲಾ ರೋಡ್ ಸೈಡ್ ಮಾಡಕ್ಕಾಗಲ್ಲ.. ಈ ದಾಳಿಯ ಹಿಂದೆ ಬೇರೆ ದೇಶದ ಕೈವಾಡ ಇದೆ. ಪಾಕಿಸ್ತಾನ ಮೂಲದ ಜೈಶ್ ಎ ಮೊಹ್ಮದ್ ಮತ್ತು ಲಷ್ಕರ್ ಎ ತೊಯ್ಬಾ ಸಂಘಟನೆ ಕೂಡ ಭಾಗಿಯಾಗಿರೋದನ್ನು ಸೂಚಿಸುತ್ತೆ ಅಂತ ಶ್ರೀನಗರದಲ್ಲಿ ಸೇನಾ ಕಮಾಂಡರ್ ಆಗಿರೋ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಹೇಳಿದ್ದಾರೆ. ಜೊತೆಗೆ ಇಂಥಹ ದಾಳಿಗಳು ಇನ್ನೂ ಮುಂದುವರಿಯೋದ್ರ ಜೊತೆಗೆ ಮುಂಬರುವ ದಿನಗಳಲ್ಲಿ ಹೆಚ್ಚಾಗಲೂಬಹುದು ಅಂತ ತಿಳಿಸಿದ್ದಾರೆ.

ಡ್ರೋನ್ ಮತ್ತು ಹಾರುವ ವಸ್ತುಗಳನ್ನು ದೇಶದ್ರೋಹಿಗಳು ಮಿಸ್ ಯೂಸ್ ಮಾಡ್ತಿರೋ ಬೆನ್ನಲ್ಲೇ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಇಂಥಹ ಯಾವುದೇ ವಸ್ತುಗಳ ಸಂಗ್ರಹ, ಮಾರಾಟ, ಬಳಕೆ, ಸಾಗಾಟದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಮತ್ತೊಂದ್ಕಡೆ ಬಿಹಾರದಲ್ಲಿ ಮೂವರನ್ನು ವಶಕ್ಕೆ ಪಡೆದು, ಅವರ ಬಳಿ ಇದ್ದ 8 ಡ್ರೋನ್​​​ಗಳನ್ನು ವಶಕ್ಕೆ ಪಡೆಯಲಾಗಿದೆ. ನಂತರ ವಿಚಾರಣೆ ವೇಳೆ ಅವರು ಮದುವೆ ವಿಡಿಯೋಗ್ರಫಿಗೆ ಡ್ರೋನ್ ಹಾರಿಸಿದ್ರು ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply