ಲಾಕ್​ಡೌನ್ ಅವಧಿಯಲ್ಲಿ ವಿಮಾನ ಟಿಕೆಟ್​ ಬುಕ್ ಮಾಡಿದವರಿಗೆ ಗುಡ್​ ನ್ಯೂಸ್

masthmagaa.com:

ಲಾಕ್​ಡೌನ್ ಅವಧಿಯಲ್ಲಿ ವಿಮಾನ ಟಿಕೆಟ್ ಬುಕ್ ಮಾಡಿ ಹಣ ಕಳೆದುಕೊಂಡವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮಾರ್ಚ್​ 25ರಿಂದ ಮೇ 3ರವರೆಗೆ ಲಾಕ್​ಡೌನ್​ನ ಮೊದಲ ಎರಡು ಹಂತಗಳಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ‘ಸಂಪೂರ್ಣ ಹಣವನ್ನು ಮರುಪಾವತಿ ಮಾಡಲಾಗುವುದು’ ಅಂತ ಸುಪ್ರೀಂಕೋರ್ಟ್​ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.

ಭಾರತದಲ್ಲಿ ಕೊರೋನಾ ಹಾವಳಿ ಹಿನ್ನೆಲೆ ಮಾರ್ಚ್ 24ರಿಂದ ಲಾಕ್​ಡೌನ್ ಹೇರಲಾಗಿತ್ತು. ಸೋಂಕು ಹರಡುವುದನ್ನು ತಡೆಯಲು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಮೊದಲೇ ವಿಮಾನ ಟಿಕೆಟ್ ಕಾಯ್ದಿರಿಸಿದ್ದ ಸಾಕಷ್ಟು ಪ್ರಯಾಣಿಕರು ಸಮಸ್ಯೆ ಅನುಭವಿಸಿದ್ದರು. ಇದೀಗ ಹಣ ಕಳೆದುಕೊಂಡವರಿಗೆ ಆ ಹಣ ಸಂಪೂರ್ಣವಾಗಿ ರೀಫಂಡ್ ಆಗಲಿದೆ.

-masthmagaa.com

Contact Us for Advertisement

Leave a Reply