ಟಿಕ್‌ಟಾಕ್‌ ಕುರಿತು ವಿಚಾರಣೆ ನಡೆಸುತ್ತಿರೊ ಅಮೆರಿಕ! ಟಿಕ್‌ಟಾಕ್‌ ಸಿಇಒ ಹೇಳಿದ್ದೇನು?

masthmagaa.com:

ಇತ್ತೀಚಿನ ದಿನಗಳಲ್ಲಿ ವಿವಿಧ ದೇಶಗಳು ಚೀನಾ ಮೂಲದ ಟಿಕ್‌ಟಾಕ್‌ ಆ್ಯಪ್‌ನ್ನ ಬ್ಯಾನ್‌ ಮಾಡ್ತಿವೆ. ಈ ಹಿನ್ನೆಲೆ ಇದೀಗ ಅಮೆರಿಕ ಟಿಕ್‌ಟಾಕ್‌ ಕುರಿತು ವಿಚಾರಣೆ ನಡೆಸೋಕೆ ಮುಂದಾಗಿದೆ. ಟಿಕ್‌ಟಾಕ್‌ ಅನ್ನ ಚೀನಿ ಸರ್ಕಾರ ನಿಯಂತ್ರಿಸುತ್ತಿದೆ ಅನ್ನೊ ಅನುಮಾನ ಹಾಗೂ ಭದ್ರತಾ ಕಾಳಜಿಯಿಂದ ಅಮೆರಿಕದಲ್ಲಿ ಟಿಕ್‌ಟಾಕ್‌ಗೆ ನಿಷೇಧ ಹೇರುವ ಕುರಿತು ಪರಿಶೀಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಟಿಕ್‌ಟಾಕ್‌ ಸಿಇಒ ಶೌ ಝಿ ಚೆವ್ ಅವರು ಅಮೆರಿಕದ ಸಂಸತ್ತಿನ ಮುಂದೆ ವಿಚಾರಣೆಗೆ ಹಾಜರಾಗಿ, ಅವ್ರಿಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. 4 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ತಮ್ಮ ಆ್ಯಪ್‌ನಿಂದ ಅಮೆರಿಕದ ಭದ್ರತೆಗೆ ಯಾವುದೇ ರೀತಿ ತೊಂದರೆ ಆಗಲ್ಲ, ಅಮೆರಿಕದ ಬಳಕೆದಾರರ ಡೇಟಾವನ್ನ ಹಂಚಿಕೊಳ್ಳಲ್ಲ ಅಂತ ಆ್ಯಪ್‌ ಕುರಿತು ಸಮರ್ಥನೆ ನೀಡಿದ್ದಾರೆ. ಇನ್ನು ಇದೇ ವೇಳೆ 2020ರಲ್ಲಿ ಭಾರತ ಟಿಕ್‌ಟಾಕ್‌ನ್ನ ಬ್ಯಾನ್‌ ಮಾಡಿದ ಬಗ್ಗೆ ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರಿಸಿದ ಚೆವ್‌, LAC ಬಳಿ ಭಾರತ ಹಾಗೂ ಚೀನಾ ಪಡೆಗಳ ಕಾದಾಟದ ನಂತರ ಭಾರತ ತನ್ನ ರಾಷ್ಟ್ರೀಯ ಭದ್ರತೆ ಹಾಗೂ ಖಾಸಗಿತನಕ್ಕ ಧಕ್ಕೆ ಉಂಟುಮಾಡುತ್ತೆ ಅಂತ ಟಿಕ್‌ಟಾಕ್‌ ಸೇರಿದಂತೆ ಹಲವಾರು ಚೀನಿ ಆ್ಯಪ್‌ಗಳನ್ನ ಬ್ಯಾನ್‌ ಮಾಡ್ತು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply