ಜಡ್ಜ್‌ ನೇಮಕಾತಿಯಲ್ಲಿ ಸರ್ಕಾರದ ಪ್ರತಿನಿಧಿಗಳಿರಬೇಕು: ಕಾನೂನು ಸಚಿವ

masthmagaa.com:

ಕೋರ್ಟ್‌ಗಳಲ್ಲಿ ನ್ಯಾಯಾಧೀಶರನ್ನ ನೇಮಿಸುವ ಕೊಲಿಜಿಯಂ ವ್ಯವಸ್ಥೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಹಾಗೂ ಕೇಂದ್ರ ಸರ್ಕಾರದ ನಡುವಿನ ಹಗ್ಗಜಗ್ಗಾಟ ಮುಂದುವರೆದಿದೆ. ಇದೀಗ, ಕೊಲಿಜಿಯಂ ವ್ಯವಸ್ಥೆಯಲ್ಲಿನಲ್ಲಿ ಸರ್ಕಾರದ ಪ್ರತಿನಿಧಿಗಳನ್ನ ಸೇರಿಸಬೇಕು. ಇದ್ರಿಂದ ಪಾರದರ್ಶಕತೆ ಹೆಚ್ಚುತ್ತೆ ಅಂತ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು, ದೇಶದ ಮುಖ್ಯ ನ್ಯಾಯಾಧೀಶ ಡಿವೈ ಚಂದ್ರಚೂಡ್‌ ಅವ್ರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರೋ ಆಪ್‌ ಮುಖ್ಯಸ್ಥ, ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಈ ಪತ್ರ ಅಪಾಯಕಾರಿಯಾಗಿದೆ ಅಂತ ಹೇಳಿದ್ದಾರೆ. ಜೊತೆಗೆ ನ್ಯಾಯಾಂಗ ನೇಮಕಾತಿಯಲ್ಲಿ ಸರ್ಕಾರದ ಮಧ್ಯಸ್ಥಿಕೆ ಇರ್ಲೆಬಾರ್ದು. ಇದು ಅಪಾಯಕಾರಿ ನಡೆ ಅಂತ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರಿಜಿಜು, ನೀವು ಕೋರ್ಟ್‌ನ ನಿರ್ದೇಶನವನ್ನ ಗೌರವಿಸ್ತೀರಿ ಅಂತ ಭಾವಿಸಿದ್ದೇನೆ. ಯಾಕಂದ್ರೆ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAP)ಯನ್ನ ರದ್ದುಗೊಳಿಸುವಾಗ, ಕೊಲಿಜಿಯಂ ವ್ಯವಸ್ಥೆಯನ್ನ ಪುನರ್‌ ರಚನೆ ಮಾಡಲು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ನಿರ್ದೇಶನ ನೀಡಿತ್ತು. ಆದರ ಫಾಲೋಅಪ್‌ ಆಗಿ ಈ ಪತ್ರ ಬರೆಯಲಾಗಿದೆ ಅಂತ ರಿಜಿಜು ತಮ್ಮ ಪತ್ರವನ್ನ ಸಮರ್ಥಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply