ಮತ್ತೊಮ್ಮೆ ಗಗನಯಾನ ಕ್ರೂ ಮಾಡ್ಯೂಲ್ ಪರೀಕ್ಷೆ: ಇಸ್ರೋ

masthmagaa.com:

ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನದ ಕ್ರೂ-ಮಾಡ್ಯೂಲ್ , ಅಂದ್ರೆ ಗಗನಯಾನಿಗಳು ಕೂರೋ ಪೇಲೋಡನ್ನ ಮತ್ತೊಮ್ಮೆ ಪರೀಕ್ಷೆ ಮಾಡಲು ಇಸ್ರೋ ಪ್ಲಾನ್‌ ಮಾಡಿದೆ. ಕಳೆದ ತಿಂಗಳು ಅಕ್ಟೋಬರ್‌ 21 ರಂದು ಗಗನಯಾನದ ಕ್ರೂ-ಎಸ್ಕೇಪ್‌ ಸಿಸ್ಟಮ್‌, ಅಂದ್ರೆ ಡೇಂಜರಸ್‌ ಸಂದರ್ಭಗಳಲ್ಲಿ ಗಗನಯಾನಿಗಳು ರಾಕೆಟ್‌ನಿಂದ ಬೇರಾಗಿ ಪ್ರಾಣ ಉಳಿಸಿಕೊಳ್ಳೊ Abort Mission-1ನ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆ ಯಶಸ್ವಿ ಕೂಡ ಆಗಿತ್ತು. ಆದ್ರೆ ಬಂಗಾಳ ಕೊಲ್ಲಿಗೆ ಪ್ಯಾರಚೂಟ್‌ ಸಹಾಯದಿಂದ ಬಂದಿಳಿದ ಕ್ರೂ ಮಾಡ್ಯೂಲ್ ಉಲ್ಟಾ ಆಗಿತ್ತು. ಗಗನಯಾನಿಗಳ ತಲೆ ಕೆಳಗೆ, ಕಾಲು ಮೇಲಾಗೋತರ ಲ್ಯಾಂಡ್‌ ಆಗಿತ್ತು. ಈ ಲೋಪವನ್ನ ಸರಿಪಡಿಸಿ, ಕ್ರೂ ಮಾಡ್ಯೂಲ್‌ನ್ನ ಸರಿಯಾದ ಪೊಸಿಷನ್‌ನಲ್ಲಿ ಲ್ಯಾಂಡ್‌ ಮಾಡೋಕೆ ಇಸ್ರೋ ಇನ್ನೊಂದು ಪರೀಕ್ಷೆ ಮಾಡಲಿದೆ. ಈ ಬಗ್ಗೆ ಗಗನಯಾನ್‌ ಮಿಷನ್‌ ಡೈರೆಕ್ಟರ್‌ ಎಸ್. ಶಿವಕುಮಾರ್‌ ಹೇಳಿದ್ದಾರೆ. ಇನ್ನು ನೇರವಾಗಿ ಅಥ್ವಾ ತಲೆಕೆಳಗಾಗಿ ಲ್ಯಾಂಡಿಂಗ್‌ಗಳೆರಡೂ ಸೇಫ್‌. ಆದ್ರೆ ತಲೆಕೆಳಗಾಗೋದನ್ನ ಅವಾಯ್ಡ್‌ ಮಾಡೋಕೆ, ಕಾರುಗಳಲ್ಲಿರೊ ಏರ್‌ಬ್ಯಾಗ್‌ ಮಾದರಿಯ ಬಲೂನ್‌ ಒಳಗೊಂಡಿರೊ ಸಿಸ್ಟಮ್‌ನ್ನ ಪರೀಕ್ಷೆ ಮಾಡಲಾಗತ್ತೆ ಅಂತ ಶಿವಕುಮಾರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply