ಷೇರುಪೇಟೆ: 5.5 ಲಕ್ಷ ಕೋಟಿ ರೂ. ಲಾಸ್‌ ಮಾಡಿಕೊಂಡ ಹೂಡಿಕೆದಾರರು

masthmagaa.com:

ವಾರದ ಎರಡನೇ ಸೆಷನ್‌ನಲ್ಲೂ ಭಾರತದ ಷೇರುಪೇಟೆ ನೀರಸ ಪ್ರದರ್ಶನ ನೀಡಿದೆ. ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಕಂಪನಿಗಳು ಒಳ್ಳೆ ಪರ್ಫಾಮೆನ್ಸ್‌ ನೀಡುವಲ್ಲಿ ವಿಫಲವಾಗಿದ್ದು, ಸ್ಟಾಕ್‌ ಮಾರ್ಕೆಟ್‌ ರೆಡ್‌ ಲಿಸ್ಟ್‌ನಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಹೂಡಿಕೆದಾರರು ಸುಮಾರು 5.5 ಲಕ್ಷ ಕೋಟಿ ರೂಪಾಯಿ ಲಾಸ್‌ ಮಾಡಿಕೊಂಡಿದ್ದಾರೆ. ನಿಫ್ಟಿಯಲ್ಲಿ ಹಿಂದೂಸ್ತಾನ್‌ ಯುನಿಲಿವರ್‌, ಟೆಕ್‌ ಮಹೀಂದ್ರಾ, ಬ್ರಿಟಾನಿಯಾ ಇಂಡಸ್ಟ್ರೀಸ್‌, ನೆಸ್ಲೆ ಇಂಡಿಯಾ ಮತ್ತು ಟಾಟಾ ಕನ್ಸಲ್ಟೆನ್ಸಿ ಟಾಪ್‌ ಗೇನರ್ಸ್‌ ಆಗಿದ್ರೆ, ಬಜಾಜ್‌ ಆಟೋ, ಪವರ್‌ ಗ್ರಿಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ, ಆಯಿಲ್‌ & ನ್ಯಾಚುರಲ್‌ ಗ್ಯಾಸ್‌ ಕಾರ್ಪೋರೇಷನ್‌, ಇಂಡಸ್‌ಇಂಡ್‌ ಬ್ಯಾಂಕ್‌ ಮತ್ತು ಹಿಂಡಾಲ್ಕೊ ಇಂಡಸ್ಟ್ರೀಸ್‌ ಟಾಪ್‌ ಲೂಸರ್ಸ್‌ ಆಗಿವೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 383.69 ಪಾಯಿಂಟ್ಸ್‌ ಕಡಿಮೆಯಾಗಿ 73,511.85ಕ್ಕೆ ಕುಸಿದಿದೆ. ಇನ್ನು ನಿಫ್ಟಿ 140.20 ಪಾಯಿಂಟ್ಸ್‌ ಕಳೆದುಕೊಂಡು 22,302.50ಕ್ಕೆ ಇಳಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ ಯಾವ್ದೇ ಬದಲಾವಣೆಯಾಗದೇ 83.52 ಆಗಿದೆ. (83 ರೂಪಾಯಿ 52 ಪೈಸೆ).

-masthmagaa.com

Contact Us for Advertisement

Leave a Reply