ಮೂರನೇ ದಿನವೂ ಮಾರ್ಕೆಟ್‌ ನೀರಸ ಪ್ರದರ್ಶನ!

masthmagaa.com:

ಸತತ ಮೂರನೇ ಸೆಶನ್‌ನಲ್ಲೂ ಭಾರತದ ಸ್ಟಾಕ್‌ ಮಾರ್ಕೆಟ್‌ ಸುಧಾರಿಸಿಕೊಂಡಿಲ್ಲ. ಬ್ಯಾಂಕಿಂಗ್‌ ಹೆವಿವೆಯ್ಟ್‌ ಸ್ಟಾಕ್‌ಗಳು ಮಾರ್ಕೆಟ್‌ ಮೊಮೆಂಟಮ್‌ಗೆ ಹೊರೆಯಾಗಿವೆ. ಮುಖ್ಯವಾಗಿ HDFC ಹಾಗೂ ICICI ಬ್ಯಾಂಕ್‌ಗಳು ಮಾರ್ಕೆಟ್‌ ಮೇಲೆ ಒತ್ತಡ ಹಾಕಿವೆ. ಹಾಗಾಗಿ ದಿನದ ಆರಂಭದಲ್ಲಿ ಒಂದಷ್ಟು ಲಾಭ ಗಳಿಸಿದ್ರೂ ನಂತರ ಡಲ್‌ ಆಗಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ ಕೇವಲ 45 ಪಾಯಿಂಟ್ಸ್‌ ಕಳೆದುಕೊಂಡು 73,465ಕ್ಕೆ ರೀಚ್‌ ಆದ್ರೆ, ನಿಫ್ಟಿ ಯಾವುದೇ ಬದಲಾವಣೆ ಇಲ್ಲದೆ 22,303ಕ್ಕೆ ರೀಚ್‌ ಆಗಿದೆ. ಇನ್ನು ಡಾಲರ್‌ ಮುಂದೆ ರೂಪಾಯಿ ಮೌಲ್ಯ ಯಾವುದೇ ಬದಲಾವಣೆ ಇಲ್ಲದೆ 83 ರೂಪಾಯಿ 51 ಪೈಸೆಯಷ್ಟಿದೆ.

-masthmagaa.com

Contact Us for Advertisement

Leave a Reply