16 ದಿನಗಳ ಕ್ರೀಡಾಹಬ್ಬ ಒಲಿಂಪಿಕ್ಸ್​ಗೆ ಇವತ್ತು ತೆರೆ!

masthmagaa.com:

ಟೋಕ್ಯೋದಲ್ಲಿ ಕೊರೋನಾ ಭೀತಿ ನಡುವೆಯೇ 16 ದಿನಗಳ ಕ್ರೀಡಾ ಹಬ್ಬ ಇವತ್ತು ತೆರೆಕಂಡಿದೆ. ಜುಲೈ 23ರಂದು ಶುರುವಾಗಿದ್ದ ಒಲಿಂಪಿಕ್ಸ್​ನಲ್ಲಿ ಭಾರತ ಏಳು ಪದಕಗಳನ್ನ ಗೆಲ್ಲೋದ್ರ ಮೂಲಕ ಇತಿಹಾಸ ಸೃಷ್ಟಿಸಿದೆ. ಇನ್ನು ಟಾಪ್‌ 5ನಲ್ಲಿರೋ ದೇಶಗಳು ಅಂದ್ರೆ ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೆರಿಕ 39 ಚಿನ್ನದ ಮೆಡಲ್‌ ಗೆಲ್ಲೋದ್ರ ಮೂಲಕ ನಂಬರ್‌ 1 ಸ್ಥಾನದಲ್ಲಿದೆ. ಚೀನಾ 38 ಚಿನ್ನದ ಮೆಡಲ್‌ ನೊಂದಿಗೆ 2 ನೇ ಸ್ಥಾನದಲ್ಲಿದೆ. ಜಪಾನ್‌ 27 ಚಿನ್ನದ ಪದಕ ಗೆಲ್ಲೋದ್ರ ಮೂಲಕ ಮೂರನೇ ಸ್ಥಾನದಲ್ಲಿದೆ. ಗ್ರೇಟ್‌ ಬ್ರಿಟನ್‌ 22 ಚಿನ್ನದ ಪದಕ ಗೆಲ್ಲೋದ್ರ ಮೂಲಕ 4 ನೇ ಸ್ಥಾನದಲ್ಲಿದೆ. 20 ಚಿನ್ನದ ಪದಕ ಗೆಲ್ಲೋದ್ರ ಮೂಲಕ ರಷ್ಯನ್‌ ಒಲಿಂಪಿಕ್ಸ್‌ ಕಮಿಟಿ 5 ನೇ ಸ್ಥಾನದಲ್ಲಿದೆ. ಇನ್ನು ಮುಂದಿನ ಸಮ್ಮರ್‌ ಒಲಿಂಪಿಕ್ಸ್‌ 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿದೆ. ಹಾಗೂ ಇದೇ ತಿಂಗಳು 24 ರಂದು ಟೋಕ್ಯೋದಲ್ಲಿ ಪ್ಯಾರಾಲಿಂಪಿಕ್ಸ್‌ ಶುರುವಾಗಲಿದ್ದು, ಸೆಪ್ಟೆಂಬರ್ 5ರವರೆಗೆ ನಡೆಯಲಿದೆ.

-masthmagaa.com

Contact Us for Advertisement

Leave a Reply