ಒಲಿಂಪಿಕ್ಸ್​​ನಲ್ಲಿ ಮತ್ತೊಂದು ಪದಕ ಗೆಲ್ಲುವತ್ತ ಭಾರತ

masthmaga.com:

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಮತ್ತೊಂದು ಪದಕ ಗೆಲ್ಲೋ ಸನಿಹದಲ್ಲಿದೆ ಭಾರತ. ಭಾರತದ ಮಹಿಳಾ ಬಾಕ್ಸರ್​ ಲೊವ್​ಲಿನಾ ಬೋರ್ಗಾಹೈನ್​ ಜರ್ಮನಿಯ ಬಾಕ್ಸರ್ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್​​ಫೈನಲ್ ಪ್ರವೇಶಿಸಿದ್ದಾರೆ. 64ರಿಂದ 69 ಕೆಜಿಯ ವೆಲ್ಟರ್​ವೇಟ್​ ವಿಭಾಗದಲ್ಲಿ ನಡೆದ ಪಂದ್ಯ ಇದಾಗಿತ್ತು. ಅಸ್ಸಾಂ ಮೂಲದ 23 ವರ್ಷದ ಬಾಕ್ಸರ್ ಆಗಿರೋ ಲೋವ್​ಲಿನಾ ಬೋರ್ಗಾಹೈನ್​ ಮತ್ತು ತೈವಾನ್​ ಮೂಲದ ಬಾಕ್ಸರ್ ನಡುವೆ ಜುಲೈ 30ಕ್ಕೆ ಕ್ವಾರ್ಟರ್​ ಫೈನಲ್​ ಮ್ಯಾಚ್ ನಡೆಯಲಿದೆ. ಇದರಲ್ಲಿ ಗೆದ್ರೆ ಒಂದು ಪದಕ ಸಿಗೋದು ಖಚಿತ. ಇನ್ನು ಭಾರತದ ಮೊದಲ ಫೆನ್ಸರ್​ ಆಗಿ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪ್ರತಿನಿಧಿಸಿದ್ದ ಭವಾನಿ ದೇವಿ ಸೋತಿದ್ದಾರೆ. ಮತ್ತೊಂದುಕಡೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನ ಹಾರಿಸಿದ್ದ ವೇಟ್​ ಲಿಫ್ಟರ್​ ಮೀರಾಬಾಯಿ ಚಾನು ಇವತ್ತು ತವರು ರಾಜ್ಯ ಮಣಿಪುರಕ್ಕೆ ವಾಪಸ್ ಬಂದಿದ್ದಾರೆ. ಮಣಿಪುರ ಸಿಎಂ ಬಿರೇನ್​ ಸಿಂಗ್ ಸ್ವತಃ ತಾವೇ ಇಂಫಾಲ್​ ಏರ್​ಪೋರ್ಟ್​ಗೆ ಹೋಗಿ ಮೀರಾಬಾಯಿಯನ್ನ ಸ್ವಾಗತಿಸಿದ್ದಾರೆ. ನಂತ್ರ ಚಾನು ಕಾರಿನಲ್ಲಿ ಹೋಗ್ತಿದ್ದಾಗ ರಸ್ತೆ ಪಕ್ಕದಲ್ಲಿ ಅಭಿಮಾನಿಗಳು ಸಾಲಾಗಿ ನಿಂತು ಅಭಿನಂದಿಸಿದ್ರು.

-masthmagaa.com

Contact Us for Advertisement

Leave a Reply