ಒಲಿಂಪಿಕ್ಸ್​ನಲ್ಲಿಂದು ಏನೇನಾಯ್ತು..? ಕಂಪ್ಲೀಟ್ ಅಪ್ಡೇಟ್ ಇಲ್ಲಿದೆ ನೋಡಿ..

masthmagaa.com:

ಟೋಕಿಯೋ ಒಲಿಂಪಿಕ್ಸ್​ನ ಪುರುಷರ ಹಾಕಿ ಸೆಮಿ ಫೈನಲ್​ನಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಭಾರತ ಮತ್ತು ಬೆಲ್ಜಿಯಂ ತಂಡಗಳ ನಡುವೆ ಇವತ್ತು ನಡೆದ ಸೆಮೀಸ್​ನಲ್ಲಿ ಬೆಲ್ಜಿಯಂ 5-2 ಗೋಲುಗಳಿಂದ ಭಾರತವನ್ನ ಸೋಲಿಸಿದೆ. ಈ ಮೂಲಕ ಭಾರತದ ಚಿನ್ನದ ಪದಕ ಕನಸು ನುಚ್ಚು ನೂರಾಗಿದೆ. ಆದ್ರೆ ಕಂಚಿನ ಪದಕದ ಆಸೆ ಇನ್ನೂ ಜೀವಂತವಾಗುಳಿದಿದೆ. ಇವತ್ತಿನ ಮ್ಯಾಚನ್ನ ಪ್ರಧಾನಿ ಮೋದಿ ಕೂಡ ವೀಕ್ಷಿಸಿದ್ರು. ಮ್ಯಾಚ್​ ಮುಗಿದ ಬಳಿಕ ತಂಡದ ನಾಯಕ ಮನ್​ಪ್ರೀತ್ ಸಿಂಗ್​ ಜೊತೆ ಪ್ರಧಾನಿ ದೂರವಾಣಿ ಮೂಲಕ ಮಾತನಾಡಿದ್ದಾರೆ. ಆಗಸ್ಟ್ 5ನೇ ತಾರೀಖು ಜರ್ಮನಿ ಜೊತೆ ಭಾರತ ಕಂಚಿನ ಪದಕಕ್ಕೆ ಸೆಣಸಾಟ ನಡೆಸಲಿದೆ. ಇನ್ನು ನಾಳೆ ಮಧ್ಯಾಹ್ನ 3.30ಕ್ಕೆ ಮಹಿಳೆಯರ ಹಾಕಿ ಸೆಮಿ ಫೈನಲ್​ ಮ್ಯಾಚ್​ ನಡೆಯಲಿದೆ. ಇದರಲ್ಲಿ ಭಾರತದ ವನಿತೆಯರು ಮತ್ತು ಅರ್ಜೆಂಟೀನಾ ವನಿತೆಯರು ಮುಖಾಮುಖಿಯಾಗಲಿದ್ದಾರೆ. ಬಾಕ್ಸಿಂಗ್​ ಸೆಮಿ ಫೈನಲ್​​ನಲ್ಲಿ ಭಾರತದ ಲೊವ್​ಲೀನಾ ಬೋರ್ಗಾಹೈನ್​​ ಮತ್ತು ಟರ್ಕಿ ಆಟಗಾತಿ ನಡುವೆ ನಾಳೆ ಬೆಳಗ್ಗೆ 11 ಗಂಟೆಗೆ ಮ್ಯಾಚ್​ ನಡೆಯಲಿದೆ. ಇನ್ನು ಬ್ಯಾಡ್ಮಿಂಟನ್​​ ಮಹಿಳೆಯರ ಸಿಂಗಲ್ಸ್​ನಲ್ಲಿ ಕಂಚು ಗೆದ್ದಿದ್ದ ಪಿ.ಸಿ. ಸಿಂಧು ತಮ್ಮ ಕೋಚ್​ ಜೊತೆ ಇವತ್ತು ದೆಹಲಿಗೆ ಬಂದಿದ್ದಾರೆ. ಇನ್ನು ಇವತ್ತು ಮೆಡಲ್ಸ್​ ಪಟ್ಟಿಯಲ್ಲಿ ಯಾರು ಎಷ್ಟನೇ ಸ್ಥಾನದಲ್ಲಿದ್ದಾರೆ ಅಂತ ನೋಡೋದಾದ್ರೆ, 32 ಚಿನ್ನದ ಪದಕಗಳೊಂದಿಗೆ ಚೀನಾ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಯುಎಸ್​​ 24, ಜಪಾನ್ 19, ಆಸ್ಟ್ರೇಲಿಯಾ 14 ಚಿನ್ನದ ಪದಕಗಳೊಂದಿಗೆ ಟಾಪ್ ಫೋರ್​ನಲ್ಲಿವೆ. ಭಾರತ ಒಂದು ಬೆಳ್ಳಿ, ಒಂದು ಕಂಚಿನ ಪದಕದೊಂದಿಗೆ 64ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply