ಒಲಿಂಪಿಕ್ಸ್​ನಲ್ಲಿ ರಷ್ಯಾ ಹೆಸರು ROC ಅಂತ ಇರೋದೇಕೆ ಗೊತ್ತಾ?

masthmagaa.com:

ಟೋಕಿಯೋ ಒಲಿಂಕ್ಸ್​ನಲ್ಲಿ ರಷ್ಯಾಗೆ ರಷ್ಯನ್ ಒಲಿಂಪಿಕ್ ಕಮಿಟಿ ಅಥವಾ ಆರ್​ಒಸಿ ಅಂತ ಯಾಕೆ ಕರೀತಾರೆ ಅನ್ನೋದಕ್ಕೆ ಒಂದು ಇಂಟರೆಸ್ಟಿಂಗ್ ಕಾರಣ ಇದೆ. ಅಂದ್ಹಾಗೆ 2011ರಿಂದ 2015ರವರೆಗೆ ವರ್ಲ್ಡ್​ ಡೋಪಿಂಗ್ ಏಜೆನ್ಸಿ ನಡೆಸಿದ ತನಿಖೆಯಲ್ಲಿ ಸಾವಿರಕ್ಕೂ ಹೆಚ್ಚು ರಷ್ಯಾದ ಅಥ್ಲೀಟ್​​ಗಳು ಡೋಪಿಂಗ್ ಹಗರಣದಲ್ಲಿ ಸಿಕ್ಕಿಬಿದ್ದಿದ್ರು. ಈ ಹಿನ್ನೆಲೆ ರಷ್ಯಾ ಮೇಲೆ 2020ರಲ್ಲಿ 2 ವರ್ಷಗಳ ಬ್ಯಾನ್​ ಹೇರಲಾಗಿತ್ತು. ಅಂದ್ರೆ ಒಲಿಂಪಿಕ್ಸ್​, ಪ್ಯಾರಾಲಿಂಪಿಕ್ಸ್​ ಮತ್ತು ವರ್ಲ್ಡ್​ ಚಾಂಪಿಯನ್​ಶಿಪ್​​ನಲ್ಲಿ ರಷ್ಯಾ ಭಾಗವಹಿಸೋ ಹಾಗಿಲ್ಲ ಅಂತ ನಿರ್ಬಂಧ ಹೇರಲಾಗಿತ್ತು. ಆದ್ರೆ ಡೋಪಿಂಗ್​ ಹಗರಣದಲ್ಲಿ ಸಿಕ್ಕಿಹಾಕಿಕೊಳ್ಳದ ರಷ್ಯಾ ಆಟಗಾರರು ಒಲಿಂಪಿಕ್ಸ್​ನಲ್ಲಿ ಭಾಗವಹಿಸಲು ಅವಕಾಶ ನೀಡಲಾಯ್ತು. ಆದ್ರೆ ರಷ್ಯಾ ಬದಲು ರಷ್ಯನ್​ ಒಲಿಂಪಿಕ್​ ಕಮಿಟಿ ಅನ್ನೋ ಹೆಸರಿನಲ್ಲಿ ಭಾಗವಹಿಸಬೇಕು. ಈ ಆಟಗಾರರು ರಷ್ಯಾ ಬಣ್ಣದ ಯುನಿಫಾರ್ಮ್​ ಧರಿಸಬಹುದು, ಆದ್ರೆ ಅವರೇನಾದ್ರೂ ಚಿನ್ನದ ಪದಕ ಗೆದ್ರೆ ರಷ್ಯಾದ ರಾಷ್ಟ್ರಗೀತೆಯನ್ನ ಹಾಕಲ್ಲ, ಆಟಗಾರರು ರಾಷ್ಟ್ರ ಧ್ವಜವನ್ನ ತೋರಿಸೋ ಹಾಗಿಲ್ಲ. ರಷ್ಯಾಗೆ ಇಂಥಾ ಪರಿಸ್ಥಿತಿ ಬಂದಿರೋದು ಈಗ ಮೊದಲಲ್ಲ. 2016ರ ರಿಯೋ ಒಲಿಂಪಿಕ್ಸ್​ನಲ್ಲೂ ಹೀಗೇ ಆಗಿತ್ತು. ಕುವೈಟ್​​ ಅನ್ನ ಬ್ಯಾನ್​ ಮಾಡಲಾಗಿತ್ತು. ಆದ್ರೆ ಕುವೈಟ್​ ಆಟಗಾರರು ಅಥ್ಲೀಟ್ಸ್ ಫ್ರಮ್ ಕುವೈಟ್ ಅಂತ ಭಾಗವಹಿಸಿದ್ರು. ತಾಲಿಬಾನ್ ಆಡಳಿತದಲ್ಲಿ ಮಹಿಳೆಯರನ್ನ ತಾರತಮ್ಯದಿಂದ ನೋಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2000ನೇ ಇಸವಿಯ ಸಿಡ್ನಿ ಒಲಿಂಪಿಕ್ಸ್​ನಿಂದ ಅಫ್ಘನಿಸ್ತಾನವನ್ನ ಬ್ಯಾನ್ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply