ಸಿರೇಂಜ್ ಉತ್ಪಾದಕ ಕಂಪನಿ ಪ್ರಧಾನಿ ಮೋದಿ ಬಳಿ ಕೇಳಿದ್ದೇನು?

masthmagaa.com:
ದೇಶದ ಅತಿದೊಡ್ಡ ಸಿರೇಂಜ್ ಮತ್ತು ಸೂಜಿ ಉತ್ಪಾದಕ ಸಂಸ್ಥೆ ಉತ್ಪಾದನೆ ಮೇಲೆ ಹೇರಿರೋ ನಿರ್ಬಂಧವನ್ನು ತೆರವುಗೊಳಿಸುವಂತೆ ಪ್ರಧಾನಿ ಮೋದಿಗೆ ಒತ್ತಾಯಿಸಿದ್ದಾರೆ. ದೆಹಲಿಯ ಹೊರಭಾಗದಲ್ಲಿರೋ ಹಿಂದುಸ್ಥಾನ್ ಸಿರಿಂಜಸ್ & ಮೆಡಿಕಲ್ ಡಿವೈಸಸ್​ ಫ್ಯಾಕ್ಟರಿಯನ್ನು ವಾಯುಮಾಲಿನ್ಯ ಹಿನ್ನೆಲೆಯಲ್ಲಿ ಪೊಲುಷನ್ ಕಂಟ್ರೋಲ್ ಬೋರ್ಡ್​ ಸೂಚನೆ ಮೇರೆಗೆ ಮುಚ್ಚಲಾಗಿದೆ. ಇದ್ರಿಂದ ಕೊರೋನಾ ಲಸಿಕೆ ಅಭಿಯಾನಕ್ಕೆ ಅಗತ್ಯವಾದ ಸಿರಿಂಜ್ ಮತ್ತು ಸೂಜಿಗಳ ಪೂರೈಕೆಯ ಮೇಲೆ ಪರಿಣಾಮ ಉಂಟಾಗುತ್ತೆ ಅಂತ ಸಂಸ್ಥೆ ಎಚ್ಚರಿಸಿದೆ.
-masthmagaa.com

Contact Us for Advertisement

Leave a Reply