ಪೊಲೀಸರ ಕಸ್ಟಡಿಯಲ್ಲಿ ಅತಿಹೆಚ್ಚು ಜನ ಸತ್ತಿರೋದು ಯಾವ ರಾಜ್ಯದಲ್ಲಿ ಗೊತ್ತಾ?

masthmagaa.com:

ಅಪರಾಧಿಗಳನ್ನ ಶಿಕ್ಷಿಸಲು ಕಾನೂನಿದೆ. ಆದ್ರೆ ದೇಶದಲ್ಲಿ ಪ್ರತಿವರ್ಷ ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಪೊಲೀಸ್​ ಕಸ್ಟಡಿ ಅಥವಾ ಜುಡೀಷಿಯಲ್ ಕಸ್ಟಡಿಯಲ್ಲಿ ಅವರ ಟಾರ್ಚರ್​ಗೆ ಪ್ರಾಣ ಕಳ್ಕೊಳ್ತಿದ್ದಾರೆ. ಅಂದ್ಹಾಗೆ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಕಸ್ಟೋಡಿಯಲ್​ ಡೆತ್ಸ್​ ಬಗ್ಗೆ ಕೇಂದ್ರ ಸರ್ಕಾರ ಇವತ್ತು ಲೋಕಸಭೆಗೆ ಮಾಹಿತಿ ನೀಡಿದೆ. ಇದರಲ್ಲಿ 2020-21ರಲ್ಲಿ 1,940 ಕಸ್ಟೋಡಿಯಲ್​ ಸಾವುಗಳು ಸಂಭವಿಸಿವೆ ಅಂತಿದೆ. ಅತಿಹೆಚ್ಚು ಕಸ್ಟೋಡಿಯಲ್​ ಸಾವು ಸಂಭವಿಸಿರೋದು ಉತ್ತರಪ್ರದೇಶದಲ್ಲಿ 451.. ನಂತರ ಸ್ಥಾನದಲ್ಲಿ ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರಗಳಿವೆ. ಕರ್ನಾಟಕದಲ್ಲಿ 2020-21ರಲ್ಲಿ 8 ಕಸ್ಟೋಡಿಯಲ್ ಸಾವು ಸಂಭವಿಸಿದೆ. ಇದರಲ್ಲಿ 5 ಪೊಲೀಸ್​ ಕಸ್ಟಡಿ ಮತ್ತು ಮೂರು ಜುಡೀಷಿಯಲ್ ಕಸ್ಟಡಿ ಸಾವಾಗಿದೆ. ಒಟ್ಟಾರೆಯಾಗಿ ದೇಶದಲ್ಲಿ 2018-19ರಲ್ಲಿ 1,933 ಜನ ಮತ್ತು 2019-20ರಲ್ಲಿ 1,696 ಜನ ಕಸ್ಟಡಿಯಲ್ಲಿ ಮೃತಪಟ್ಟಿದ್ದರು.

-masthmagaa.com

 

Contact Us for Advertisement

Leave a Reply