ಆನೆಗೆ ಡಿಕ್ಕಿಯಾದ ಟ್ರೇನ್..! ಆನೆ ನರಳಾಟ ವಿಡಿಯೋ…

ಆನೆಯೊಂದಕ್ಕೆ ಟ್ರೇನ್ ಡಿಕ್ಕಿ ಹೊಡೆದ ಪರಿಣಾಮ ಆನೆ ಹಳಿಯಲ್ಲೇ ಬಿದ್ದು ನರಳಾಡಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಸಿಲಿಗುರಿ-ದುಬ್ರಿ ಎಕ್ಸ್ ಪ್ರೆಸ್ ರೈಲು ಬರುವಾಗ ಅರಣ್ಯ ಪ್ರದೇಶದಲ್ಲಿ ಆನೆಯೊಂದು ಹಳಿಗಳನ್ನು ದಾಟಲು ಮುಂದಾಗಿದೆ. ಆಗ ಅಚಾರಕ್ಕಾಗಿ ಡಿಕ್ಕಿಯಾಗಿ ಆನೆಗೆ ಸಿಕ್ಕಾಪಟ್ಟೆ ಏಟಾಗಿದೆ. ಕಾಲು ಮುರಿದಿದ್ದರಿಂದ ಹಳಿಯಲ್ಲೇ ಬಿದ್ದು ನರಳಾಡಿದ ಆನೆ, ನಂತರ ನಿಧಾನವಾಗಿ ನರಳುತ್ತಾ, ತೆವಳುತ್ತಾ ಹಳಿಯಿಂದ ಪಕ್ಕಕ್ಕೆ ಸರಿದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದ್ರೆ ನಾಚಿಕೆಗೆಟ್ಟ ಕೆಲವರು ಆ ಆನೆಯ ನರಳಾಟವನ್ನು ವಿಡಿಯೋ ಮಾಡ್ತಿರೋದು ಕೂಡ ಈ ವಿಡಿಯೋದಲ್ಲಿ ಸೆರೆಯಾಗಿದೆ.

https://twitter.com/RahulDevRising/status/1178006416449142784

Contact Us for Advertisement

Leave a Reply