ಮೋದಿ ಪ್ರವಾಸಕ್ಕೆ ಸಿಟ್ಟು: ಬಾಂಗ್ಲಾದಲ್ಲಿ ಮಂದಿರಕ್ಕೆ ಬೆಂಕಿ ಇಟ್ಟ ದುಷ್ಟರು!

masthmagaa.com:

ಪ್ರಧಾನಿ ಮೋದಿ ಬಾಂಗ್ಲಾದೇಶ ಪ್ರವಾಸ ಕೈಗೊಂಡ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದೆ. ಅಲ್ಲಿನ ಕೆಲ ಮೂಲಭೂತವಾದಿ ಮುಸ್ಲಿಮರು ಹಿಂಸಾಮಾರ್ಗ ಹಿಡಿದಿದ್ದಾರೆ. ಪ್ರಧಾನಿ ಮೋದಿ ವಾಪಸ್ ಮರಳಿದ ಬಳಿಕವೂ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆಯಂತೂ ಸಾವಿರಾರು ಮಂದಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲ.. ಬ್ರಹ್ಮನ್​​ಬರಿಯಾ ಜಿಲ್ಲೆಯಲ್ಲಿ ಹಿಂದೂ ಮಂದಿರಗಳಿಗೆ ಬೆಂಕಿ ಹಚ್ಚಿದ್ದು, ರೈಲುಗಳ ಮೇಲೆಲ್ಲಾ ದಾಳಿ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಶುಕ್ರವಾರದಿಂದ ಈವರೆಗೆ 11 ಮಂದಿ ಸಾವನ್ನಪ್ಪಿದ್ದಾರೆ.

ಪೊಲೀಸರು ಕೂಡ ಪ್ರತಿಭಟನಾಕಾರರ ವಿರುದ್ಧ ಟಿಯರ್ ಗ್ಯಾಸ್ ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದು, ಹಲವರಿಗೆ ಗಾಯಗಳಾಗಿವೆ. ಕೆಲವು ಕಡೆಯಂತೂ ಪೊಲೀಸರ ಮೇಲೆಯೇ ಪ್ರತಿಭಟನಾಕಾರರು ಕಲ್ಲು ತೂರಿ, ಹಲ್ಲೆ ನಡೆಸಿದ್ದಾರೆ. ಭಾರತದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮುಸ್ಲಿಮರಿಗೆ ತಾರತಮ್ಯ ಮಾಡುವ ನೀತಿಗಳನ್ನು ಅನುಸರಿಸುತ್ತಿದೆ ಅನ್ನೋದು ಅವರ ಆರೋಪ.. ಪ್ರಧಾನಿ ಮೋದಿ ಶನಿವಾರವೇ ವಾಪಸ್ ಬಂದಿದ್ದಾರೆ. ಆದ್ರೆ ಮೋದಿ ಬಾಂಗ್ಲಾಗೆ ಎಂಟ್ರಿ ಕೊಟ್ಟ ದಿನ ಅಂದ್ರೆ ಶುಕ್ರವಾರವೇ ಪ್ರತಿಭಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ರು. ಈ ಆ ಸಾವು ಖಂಡಿಸಿ ಪ್ರತಿಭಟನೆ ನಡೆಸಲಾಗ್ತಿದೆ.

-masthmagaa.com

Contact Us for Advertisement

Leave a Reply