ವಿಶ್ವದಲ್ಲಿ ಹೊಸ ದಾಖಲೆ ಬರೆದ ಕೊರೋನಾ!

masthmagaa.com:

ಒಂದ್ಕಡೆ ಒಮೈಕ್ರಾನ್ ಆಂತಕವಾದ್ರೆ, ಮತ್ತೊಂದ್ಕಡೆ ಯೂರೋಪಿನ ದೇಶಗಳಲ್ಲಿ ದಿನೇ ದಿನೇ ದಾಖಲೆಯ ಕೊರೋನಾ ಪತ್ತೆಯಾಗ್ತಿದೆ. ನಿನ್ನೆ ಒಂದೇ ದಿನ ಇಡೀ ವಿಶ್ವದಲ್ಲಿ 14.4 ಲಕ್ಷ ಮಂದಿಗೆ ಕೊರೋನಾ ಬಂದಿದೆ. ಕೊರೋನಾ ಶುರುವಾದ ಬಳಿಕ ಇಷ್ಟು ಮಂದಿಗೆ ಒಂದೇ ದಿನ ಕೊರೋನಾ ಬಂದಿರೋದು ಇದೇ ಮೊದಲಾಗಿದೆ.

ಇನ್ನು ಕೊರೋನಾ ಹೆಚ್ಚುತ್ತಿರೋದು ವಿಮಾನಯಾನ ಸಂಸ್ಥೆಗಳ ಮೇಲೂ ಗಂಭೀರ ಪರಿಣಾಮ ಉಂಟು ಮಾಡ್ತಿವೆ. ಇದ್ರಿಂದಾಗಿ ಕಳೆದ ಶುಕ್ರವಾರದಿಂದ ಈವರೆಗೆ ಸುಮಾರು 11,500ರಷ್ಟು ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಹತ್ತಾರು ಸಾವಿರ ವಿಮಾನಗಳ ಹಾರಾಟದಲ್ಲಿ ತಡವಾಗಿದೆ. ನಿನ್ನೆ ಒಂದೇ ದಿನ 3 ಸಾವಿರ ಮತ್ತು ಇವತ್ತು 1,100ಕ್ಕೂ ಹೆಚ್ಚು ವಿಮಾನಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಇದ್ರಿಂದ ಕ್ರಿಸ್​ಮಸ್​​​ ಹಾಲಿಡೇ ಮೇಲೆ ಬೇರೆ ಬೇರೆ ದೇಶಗಳಿಗೆ ಪ್ರವಾಸ ಕೈಗೊಂಡಿದ್ದವರು ತಮ್ಮ ದೇಶಗಳಿಗೆ ವಾಪಸ್ ಹೋಗೋಕೆ ಪರದಾಡುವಂತಾಗಿದೆ.

ಒಮೈಕ್ರಾನ್​ ಹಾವಳಿ ಹೆಚ್ಚಾಗ್ತಿದೆ ಅಂತ ಅಮೆರಿಕನ್ನರು ಹೆದರಬೇಕಾದ ಅಗತ್ಯತೆ ಇಲ್ಲ ಅಂತ ಜೋ ಬೈಡೆನ್ ಹೇಳಿದ್ದಾರೆ. ಕೊರೋನಾ ಹೆಚ್ಚಾದ್ರೆ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗಬಹುದು. ಆದ್ರೆ ಅದನ್ನು ಎದುರಿಸಲು ನಾವು ಸಿದ್ಧವಾಗಿದ್ದೀವಿ.. ಕೊರೊನಾದ ಆರಂಭಿಕ ಹಂತ ಮತ್ತು ನಂತರ ಬಂದ ಡೆಲ್ಟಾದಿಂದ ಆದಷ್ಟು ಪರಿಣಾಮ ಉಂಟಾಗೋದಿಲ್ಲ ಅಂತ ಕೂಡ ಹೇಳಿದ್ದಾರೆ.

ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 209 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಕಳೆದ ವರ್ಷದ ಮಾರ್ಚ್ ಬಳಿಕ ಒಂದೇ ದಿನ ಇಷ್ಟು ಪ್ರಕರಣ ಪತ್ತೆಯಾಗಿದ್ದು ಇದೇ ಮೊದಲು.. ಇತ್ತೀಚೆಗೆ ಕ್ಸಿಯಾನ್ ಸಿಟಿಯಲ್ಲಿ ಸೋಂಕು ಹೆಚ್ಚಿದ್ದರಿಂದ 1.3 ಕೋಟಿ ಜನಸಂಖ್ಯೆ ಇರೋ ಇಡೀ ನಗರವನ್ನು ಲಾಕ್​​ಡೌನ್ ಮಾಡಲಾಗಿತ್ತು. ಇದೀಗ ಅದಕ್ಕೆ ಹತ್ತಿರದಲ್ಲಿರೋ ಯಾನ್ ನಗರವನ್ನು ಕೂಡ ಲಾಕ್​ಡೌನ್ ಮಾಡಲಾಗಿದೆ. ಉದ್ಯಮಗಳನ್ನೆಲ್ಲಾ ಬಂದ್ ಮಾಡಿ, ಜನ ಮನೆಯ ಒಳಗೇ ಇರಬೇಕು ಅಂತ ಕಟ್ಟಪ್ಪಣೆ ಮಾಡಲಾಗಿದೆ. ಮುಂದಿನ ವರ್ಷ ಫೆಬ್ರುವರಿಯಲ್ಲಿ ವಿಂಟರ್ ಒಲಿಂಪಿಕ್ಸ್​ ನಡೆಯಲಿದ್ದು, ಕೊರೋನಾ ನಿಯಂತ್ರಿಸಲು ಚೀನಾ ಎಲ್ಲಾ ರೀತಿಯ ಸರ್ಕಸ್ ಮಾಡ್ತಾ ಇದೆ.

-masthmagaa.com

Contact Us for Advertisement

Leave a Reply